ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹರಗನಹಳ್ಳಿ ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಹರಿಹರ ನಗರದ ಆಶ್ರಯ ಬಡಾವಣೆಯ ಪವನ್ (25) ಮತ್ತು ಪ್ರಕಾಶ್ (24) ಎಂಬ ಸ್ನೇಹಿತರಿಬ್ಬರು ಸಾವನ್ನಪ್ಪಿದ್ದಾರೆ. ಪ್ರಕಾಶ ರೀಲ್ಸ್ ಮಾಡಲು ಹೋಗಿ ನೀರಲ್ಲಿ ಬಿದ್ದಿದ್ದಾನೆ. ಅವನನ್ನ ರಕ್ಷಿಸಲು ಹೋದ ಪವನ್ ಸಹ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. ಹರಿಹರದ ರಾಘವೇಂದ್ರ ಮಠದ ಬಳಿ ತುಂಗಭದ್ರ ನದಿಯಲ್ಲಿ ಓರ್ವನ ಶವ ಪತ್ತೆಯಾಗಿದೆ. ಇನ್ನೊಬ್ಬನ ಶವಕ್ಕಾಗಿ ಶೋಧ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಯುವಕರಿಬ್ಬರೂ ನೀರಲ್ಲಿ ಮುಳುಗಿದ್ದು,ಮತ್ತೊಬ್ಬ ಸ್ನೇಹಿತ, ದೃಶ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅಗ್ನಿಶಾಮಕ ದಳ ಹಾಗು ಪೊಲೀಸರಿಂದ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



