ದಾವಣಗೆರೆ: ದಾವಣಗೆರೆ ವಾಣಿಜ್ಯ ತೆರಿಗೆಗಳ ಇಲಾಖೆ ಉಪ ಆಯುಕ್ತ ಸಿದ್ದರಾಜು ನೇತೃತ್ವದ ಅಧಿಕಾರಿಗಳ ತಂಡ ವಿಜಯನಗರ ಜಿಲ್ಲೆಯ ಹರಪನಗಳ್ಳಿ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ವಸ್ತು ಖರೀದಿ ಮಾಡಿದ್ದು, ಜಿ.ಎಸ್ ಟಿ ಬಿಲ್ ನೀಡದ 12ಕ್ಕೂ ಹೆಚ್ಚು ಅಂಡಿಗಳಿಗೆ ತಲಾ 20 ಸಾವಿರ ದಂಡ ವಿಧಿಸಲಾಗಿದೆ.
ದಾವಣಗೆರೆಯಿಂದ ನಾಲ್ಕು ವಾಹನಗಳಲ್ಲಿ ಆಗಮಿಸಿದ್ದ 10ಕ್ಕೂ ಅಧಿಕ ಜನರಿದ್ದ ಅಧಿಕಾರಿಗಳ ತಂಡ ಎಲೆಕ್ಟ್ರಾನಿಕ್ಸ್, ಕಬ್ಬಿಣ ಅಂಗಡಿ, ಬಟ್ಟೆ ವ್ಯಾಪಾರ ಸೇರಿದಂತೆ 15ಕ್ಕು ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿ ತೆರಳಿದೆ. ಮಧ್ಯಾಹ್ನ 12 ಗಂಟೆಗೆ ಬಂದು ರಾತ್ರಿ 8 ಗಂಟೆ ತನಕ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿತು.
ಸಿಬ್ಬಂದಿ ವಿವಿಧ ಅಂಗಡಿಗಳಲ್ಲಿ ಗ್ರಾಹಕರ ಸೋಗಿನಲ್ಲಿ ಸಾಮಾನು ಖರೀದಿಸಿದ್ದಾರೆ. ಖರೀದಿಸಿದ ವಸ್ತುಗಳಿಗೆ ಜಿಎಸ್‍ಟಿ ಬಿಲ್ ಕೇಳಿದರೂ ಕೊಟ್ಟಿಲ್ಲ. ಅಂತಹ 12 ಪ್ರತಿ ಅಂಗಡಿಗೆ 20 ಸಾವಿರ ದಂಢ ವಿಧಿಸಲಾಗಿದೆ.
ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಅವುಗಳ ಆಧಾರದ ಮೇಲೆ ತಪಾಸಣೆ ಕೈಗೊಂಡು, ರಸೀದಿ ಕೊಡದ 12 ಅಂಗಡಿಗಳ ಮಾಲೀಕರಿಗೆ ತಲಾ 20 ಸಾವಿರ ದಂಡ ವಿಧಿಸಲಾಗಿದೆ. ಕನಿಷ್ಠ 200 ಸಾಮಾನು ಖರೀದಿಸಸಿದ್ರೆ, ಕಡ್ಡಾಯವಾಗಿ ಜಿಎಸ್‍ಟಿ ಬಿಲ್ ಕೊಡಬೇಕು ಎಂದು ಉಪ ಆಯುಕ್ತ ಸಿದ್ದರಾಜು ತಿಳಿಸಿದರು. ದಾಳಿಯಲಗಲಿ ಸಹಾಯಕ ಆಯುಕ್ತ ನಟರಾಜ್, ತೆರಿಗೆ ಅಧಿಕಾರಿಗಳಾದ ರಾಜಕುಮಾರ, ಗಾಯತ್ರಿ ಹಾಗೂ ನಾಲ್ಕು ಜನ ಪರಿವೀಕ್ಷಕರು ಭಾಗವಹಿಸಿದ್ದರು.



