ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೈಕ್ ಕಳ್ಳತನ ಆರೋಪಿ ಬಂಧಿಸಲಾಗಿದೆ. ಆರೋಪಿಯಿಂದ 3 ಲಕ್ಷ ಮೌಲ್ಯದ 10 ಬೈಕ್ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷ ನರಸಿಂಹ ವಿ ತಾಮ್ರಧ್ವಜ ಅವರ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕ ಧನಂಜಯ ರವರ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಅಶ್ವಥ ಕುಮಾರ ಎನ್. ಎಲ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಬೈಕ್ ಕಳ್ಳತನದ ಆರೋಪಿ ಚಿತ್ರದುರ್ಗದ ತಿಪ್ಪೆಸ್ವಾಮಿ ಆರ್ @ ಮೊಬೈಲ್ ತಿಪ್ಪಾ( 35) ಬಂಧಿಸಿದ್ದು, ಕೆಲವು ತಿಂಗಳಿನಿಂದ ದಾವಣಗೆರೆ ನಗರದ ಪಿ.ಜೆ ಬಡಾವಣೆ ಎಂಸಿಸಿ “ಎ” ಬ್ಲಾಕ್ ಕೆಎಸ್.ಆರ್.ಟಿ.ಸಿ ಬಸ್ ಸ್ಟಾಂಡ್, ರಾಂ ಪಾರ್ಕ ಮತ್ತು ಬಿಎಸ್ ಎನ್ ಎಲ್ ಸರ್ಕಲ್ ಬಳಿ ಇತರೆ ಕಡೆ ಕಳ್ಳತನ ಮಾಡಿದ್ದಾರೆ.
ಆರೋಪಿ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾದ 08, ವಿದ್ಯಾನಗರ ಪೊಲೀಸ್ ಠಾಣಾ ಮತ್ತು ಕೆಟೆಜೆ ನಗರ ಪೊಲೀಸ್ ಠಾಣಾ ತಲಾ ಒಂದು ಕಳವು ಪ್ರಕರಣ ಸೇರಿ ಒಟ್ಟು 10 ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 03,19.5೦೦ ರೂ.ಮೌಲ್ಯ ಬೆಲೆ ಬಾಳುವ 10 ಬೈಕ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಅಶ್ವಥ ಕುಮಾರ ಎನ್.ಎಲ್ ಸಿಬ್ಬಂದಿಗಳಾದ ಸಿದ್ದೇಶ್, ಅರುಣ ಕುಮಾರ, ಸೈಯದ್ ಅಲಿ, ಹನುಮಂತಪ್ಪ.ಸಿ ಇವರುಗಳು ಭಾಗವಹಿಸಿರುತ್ತಾರೆ. ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್, ಐಪಿಎಸ್, ದಾವಣಗೆರೆ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಅವರು ಶ್ಲಾಘಿಸಿದ್ದಾರೆ.



