ದಾವಣಗೆರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಮಿಟ್ಲಕಟ್ಟೆಯ ಪರಿಸರ ಪ್ರೇಮಿ ಸಾಲು ಮರದ ವೀರಾಚಾರಿ ಆತ್ಮಹತ್ಯೆ ಶರಣಾಗಿದ್ದಾರೆ.
ಸಾವಿರಾರು ಗಿಡಗಳನ್ನು ಬೆಳೆಸಿ ಹೆಮ್ಮರವನ್ನಾಗಿಸಿದ ವೀರಾಚಾರಿ ಸಾವಿನ ಸುದ್ದಿ ಪರಿಸರ ಪ್ರೇಮಿಗಳಲ್ಲಿ ಅಘಾತ ತಂದಿದೆ. ಇತ್ತೀಚೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಪ್ರಶ್ನಿಸಿ ನಿರಂತರ ಹೋರಾಟ ಮಾಡಿದ್ದರು. ನಿನ್ನೆ ತಡ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ. ಹಲವು ಸಮಾಜ ಪರ ಹೋರಾಟ ಮಾಡುತ್ತ ಬಂದಿದ್ದ ವೀರಾಚಾರಿ ಅವರ ಸಾವು ಸಮಾಜಕ್ಕೆ ಹಾಗೂ ಪರಿಸರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸಾವಿಗೆ ಸ್ಪಷ್ಟ ಕಾರಣ ತನಿಖೆಯಿಂದ ತಿಳಿಯಬೇಕಿದೆ.



