ದಾವಣಗೆರೆ: ನಗರ ಉಪವಿಭಾಗ 1 ವ್ಯಾಪ್ತಿಯಲ್ಲಿ ಬರುವ 220 ಕೆವಿ ಎಸ್.ಆರ್.ಎಸ್ ಕೇಂದ್ರದಿಂದ ಹೊರಡುವ ಸರಸ್ವತಿ ಎಫ್.10 ಫೀಡರ್‍ನಲ್ಲಿ ಹಾಗೂ ಡಿ.ಸಿ.ಟವರ್‍ಗಳ ಮೇಲೆ 66 ಕೆವಿ ಸಿಂಗಲ್ ಲೈನ್ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಕೆ.ಪಿ.ಟಿ.ಸಿ.ಎಲ್ ಮೇಜರ್ ವಕ್ರ್ಸ್ ವಿಭಾಗದಿಂದ ಸೆಪ್ಟೆಂಬರ್ 08 ರಂದು ಹಮ್ಮಿಕೊಂಡಿರುವುದರಿಂದ ಬೆ.10 ರಿಂದ ಸಂಜೆ 04 ಗಂಟೆಯವರಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸರಸ್ವತಿ ಬಡಾವಣೆ ಎ ಮತ್ತು ಬಿ ಬ್ಲಾಕ್, ಜಯನಗರ ಎ,ಬಿ&ಸಿ ಬ್ಲಾಕ್ ಭೂಮಿಕನಗರ ಜೆ.ಎನ್.ಕಾನ್ವೆಂಟ್ ಕೆಎಸ್‍ಎಸ್ ಕಾಲೇಜ್ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



