ಡಿವಿಜಿ ಸುದ್ದಿ, ಬೆಂಗಳೂರು: ನಾನು ಮತ್ತು ಸಿದ್ದರಾಮಯ್ಯ ವೈರಿಗಳಲ್ಲ. ವೈರತ್ವ ಎಂದರೆ ಅದು ಇಂಡಿಯಾ ಮತ್ತು ಪಾಕಿಸ್ತಾನದ್ದು. ಆದರೆ, ನಮ್ಮ ನಡುವೆ ವೈರತ್ವ ಇಲ್ಲ, ಸ್ನೇಹವಿದೆ ಎಂದು ಮಾಜಿ ಶಾಸಕ ಎಚ್. ವಿಶ್ವನಾಥ್ ಹೇಳಿದರು.
ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಅವರ ಜೊತೆ ಸಚಿವ ಸಿ.ಟಿ.ರವಿ, ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ ಸಹ ಉಪಸ್ಥಿತರಿದ್ದರು.
ಜನ ತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜ. ನಮ್ಮ ಯೋಚನೆ ಲಹರಿ ಮತ್ತು ಅವರ ಯೋಚನೆ ಲಹರಿ ಬೇರೆ ಇದ್ದ ಮಾತ್ರ ವೈರಿಗಳು ಅಂತಾ ನಿರ್ಧರಿಸಲು ಸಾಧ್ಯವಿಲ್ಲ. ನನಗೆ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಮೇಲೂ ಪ್ರೀತಿ ಇದೆ ಎಂದರು.
ಸಿದ್ದರಾಮಯ್ಯ ನಾನು ಒಂದೇ ಊರಿನವರು. ಒಟ್ಟಿಗೆ ವಕೀಲ ವೃತ್ತಿ ಜೊತೆ ರಾಜಕಾರಣ ಪ್ರಾರಂಭಿಸಿದ್ದೆವು. ಮೇಲಾಗಿ ಒಂದೇ ಸಮಾಜದವರು, ಹೀಗಾಗಿ ನಮ್ಮ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಜನತಂತ್ರ ವ್ಯವಸ್ಥೆಯಲ್ಲಿ ಜನ ನಾಯಕನಿಗೆ ಆರೋಗ್ಯವೂ ಬಹಳ ಮುಖ್ಯ. ಹೀಗಾಗಿ ಸಿದ್ದರಾಮಯ್ಯ ಬೇಗ ಗುಣಮುಖರಾಗಲಿ ಎಂದರು.



