ದಾವಣಗೆರೆ : ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಬಿಡುಗಡೆಗೆ ಆಗ್ರಹಿಸಿ ಮುರುಘಾ ಮಠದ ಭಕ್ತರು ನಗರದ ಜಯದೇವ ವೃತ್ತದಲ್ಲಿಂದು ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರು ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶರಣರ ಬಂಧನ ಭಕ್ತರಲ್ಲಿ ನೋವು ತಂದಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರಿಗೆ ಇಂತಹ ದುಷ್ಟ ಜನರು ಕಾಡಿದ್ದಾರೆ ಎಂದರು.
ಬಸವಣ್ಣ ಇಂತಹ ಪರೀಕ್ಷೆ ಎದುರಾಗಿ ಗಡಿಪಾರು ಶಿಕ್ಷೆ ನೀಡಲಾಯಿತು. ಮಹಾತ್ಮ ಗಾಂಧೀಜಿ ಅವರಿಗೆ ಗುಂಡೇಟು ತಗುಲಿದವು. ಅದೇ ರೀತಿ ಮುರುಘಾ ಶರಣರಿಗೆ ಈ ಕಳಂಕ ಬರುವಂತೆ ಮಾಡಿದ್ದಾರೆ. ಹಣ ಮತ್ತು ಅಧಿಕಾರ ಹಿಡಿಯುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದ್ದಾರೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದು ತಿಳಿಸಿದರು.



