ದಾವಣಗೆರೆ: ಮನೆ ಬಿಟ್ಟು ಬಂದಿದ್ದ ಹೊಸದುರ್ಗ ಮೂಲದ ಬಾಲಕಿಯನ್ನು ನಗರದ ಗ್ಲಾಸ್ ಹೌಸ್ ಬಳಿ ದುರ್ಗಾಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ದುರ್ಗಾಪಡೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಗ್ಲಾಸ್ ಹೌಸ್ ಬಳಿ ಅನುಮಾಸ್ಪದವಾಗಿ ಕುಳಿತಿದ್ದ ಯುವತಿಯನ್ನು ವಿಚಾರಿಸಿದ್ದಾಗ ಸರಿಯಾಗಿ ಮಾಹಿತಿ ನೀಡಿಲ್ಲ. ಬಾಲಕಿಯ ಪೋಷಕರ ಫೋನ್ ನಂಬರ್ ಪಡೆದು ವಿಚಾರಿಸಿದ್ದಾಗ ಬಾಲಕಿ ಮನೆ ಬಿಟ್ಟು ಬಂದಿರುವುದಾಗಿ ಹೇಳಿದ್ದಾರೆ. ಆಗ ಬಾಲಕಿಯನ್ನು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಸ್ ಪಿ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.