ಡಿವಿಜಿ ಸುದ್ದಿ, ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ವಿರುದ್ಧ ಉಪ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಆಂಜನಪ್ಪ ಅವಾಚ್ಯ ಪದ ಬಳಸಿ, ಗುಂಪು ಪ್ರತಿಭಟನೆಗೆ ಪ್ರಚೋದಿಸಿದ್ದರೆಂದು ಎಸ್ ಎಂ ಕೃಷ್ಣ ಅಭಿಮಾನಿ ಶಂಕರಪ್ಪ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚಿಕ್ಕಬುಳ್ಳಾಪುರದಿಂದ ಸ್ಪರ್ಧಿಸಿ ಸೋತಿದ್ದ ಎಂ. ಆಂಜನಪ್ಪ, ಸೋಲಿನ ಬಳಿಕ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು, ಎಸ್.ಎಂ. ಕೃಷ್ಣ ಅಭಿಮಾನಿಗಳಿಗೆ ನೋವು ಉಂಟು ಮಾಡಿದೆ. ಹೀಗಾಗಿ ಐಪಿಸಿ ಸೆಕ್ಷನ್ 153, 504 ಪ್ರಕರಣ ದಾಖಲಿದ್ದಾರೆ.
ಆಂಜನಪ್ಪ, ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್.ಎಂ. ಕೃಷ್ಣರವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಇಂತಹ ಫ್ರಾಡ್ ಗಳಿಗೆ ಸೀಟು ಕೊಟ್ಟಿರುವುದಕ್ಕೆ ಪಕ್ಷ ಈ ಪರಿಸ್ಥಿತಿಗೆ ಬಂದಿದೆ. ತಾಯಿ ಪಕ್ಷಕ್ಕೆ ಮೋಸ ಮಾಡಿ, ಏನು ಗತಿ ಇಲ್ಲದವರ ರೀತಿ ಇಲ್ಲಿಗೆ ಬಂದುಬಿಟ್ಟ ಎಸ್.ಎಂ. ಕೃಷ್ಣ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ.
ಇಂತಹವರನ್ನು ಮುಖ್ಯಮಂತ್ರಿ, ಗವರ್ನರ್ ಮತ್ತು ಸೆಂಟ್ರಲ್ ಮಿನಿಸ್ಟರ್ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಆಗಿದೆ. ಈ ಹೇಳಿಕೆಗಳು ನಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಗಲಭೆಗೆ ಅವಕಾಶ ಉಂಟಾಗುವಂತೆ ಪ್ರಚೋದನೆ ಭಾಷಣ ಮಾಡಿ ಜನರು ದಂಗೆ ಏಳುವ ರೀತಿಯಲ್ಲಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯವೇ ಜಾಸ್ತಿ. ಆದರೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿದೆ. ಡಾ. ಕೆ. ಸುಧಾಕರ್ 34,801 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 84,389 ಮತಗಳು ಬಿದ್ದರೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಅಂಜನಪ್ಪ ಅವರಿಗೆ 49,588 ಮತಗಳು ಬಿದ್ದಿದೆ.



