ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಶಾಂತಿಸಾಗರ ಅಚ್ಚುಕಟ್ಟು ಮತ್ತು ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ಶಾಂತಿಸಾಗರ(ಸೂಳೆಕೆರೆ) ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಯಾವ ಸಮಯದಲ್ಲಾದರು ಕೆರೆಯ ಕೋಡಿಯ ಮೇಲೆ ನೀರು ಹರಿಯುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ಸಾರ್ವಜನಿಕರು ಸೂಳೆಕೆರೆ ಸುತ್ತಾ ಹಾಗೂ ಸೂಳೆಕೆರೆ ಕೋಡಿ ಹಳ್ಳದ ಅಕ್ಕಪಕ್ಕ ಸಾರ್ವಜನಿಕರು/ಜನ ಜಾನುವಾರುಗಳ ಓಡಾಟವನ್ನು ನಿಷೇಧಿಸಲಾಗಿದೆ.
ಒಂದು ವೇಳೆ ನಿಯಮ ಉಲ್ಲಂಘಿಸಿ ಸೂಳೆಕೆರೆ ಕೋಡಿ ಅಕ್ವಡಕ್ಟ್ ಮೇಲೆ ಓಡಾಡುವುದು ಮತ್ತು ಮೊಬೈಲ್ ಫೋನ್ ಮುಖಾಂತರ ಸೆಲ್ಫೀ ತೆಗೆಯುವುದು ಮತ್ತು ಇತರೆ ಯಾವುದೇ ಚಟುವಟಿಕೆಗಳನ್ನು ಕೈಗೊಂಡಲ್ಲಿ ಕರ್ನಾಟಕ ನೀರಾವರಿ ಕಾಯ್ದೆರನ್ವಯ ಅಂತವರ ಮೇಲೆ ನಿಯಮಾನುಸಾರ ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ. ಅಲ್ಲದೇ ನಿಯಮಬಾಹಿರ ಚಟುವಟಿಕೆಯಿಂದ ಆದ ಯಾವುದೇ ಅನಾಹುತಗಳಿಗೆ ಇಲಾಖೆ ಜವಬ್ದಾರರಲ್ಲ ಎಂದು ತ್ಯಾವಣಿಗಿ ಕನೀನಿನಿ, ನಂ.3 ಭದ್ರಾ ನಾಲಾ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



