ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಬಳಿಯ ವಿದ್ಯುತ್ ವಿತರಣೆ ಕೇಂದ್ರದಲ್ಲಿ ಬೋರ್‌ವೆಲ್ ದುರಸ್ತಿ ಪಡಿಸುವ ವೇಳೆ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.
ರವಿ (40) ಮೃತಪಟ್ಟ ದುರ್ದೈವಿ ಆಗಿದ್ದಾನೆ. ಗಾಯಾಳು ರಾಜುನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ವಿತರಣೆ ಕೇಂದ್ರದಲ್ಲಿ ಬೋರ್‌ವೆಲ್‌ಗೆ ಕಬ್ಬಿಣದ ಪೈಪ್ ಇಳಿಸುವಾಗ 11 ಕೆವಿ ತಂತಿ ಪೈಪ್‌ಗೆ ತಗುಲಿ ದುರ್ಘಟನೆ ಸಂಭವಿಸಿದೆ.
ವಿಷಯ ತಿಳಿದು ಮೃತನ ನಿವಾಸಕ್ಕೆ ತೆರಳಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ, ವೈಯಕ್ತಿಕವಾಗಿ 50 ಸಾವಿರ ರೂ., ಬೆಸ್ಕಾಂ ಸಿಬ್ಬಂದಿಯಿಂದ 50 ಸಾವಿರ ರೂ. ಸಂಗ್ರಹಿಸಿ ಕುಟುಂಬಸ್ಥರಿಗೆ ವಿತರಿಸಿದರು.ಮೃತ ಹಾಗೂ ಗಾಯಾಳು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಬೆಸ್ಕಾಂ ಇಲಾಖೆಯ ಎಂಡಿ ಮಂಜುಳಾ ಅವರಿಗೆ ಸೂಚಿಸಿದರು