ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು. 23 ರಂದು 17ನೇ ರಾಜ್ಯಮಟ್ಟದ ಐಎಸ್ ಟಿಇ ವಿದ್ಯಾರ್ಥಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.23ನೇ ಶನಿವಾರ ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನೆರವೇರಲಿದ್ದು, ಕಾಲೇಜಿನ ಚೇರ್ಮನ್ ಜಿಎಂ ಲಿಂಗರಾಜು ಉಪಸ್ಥಿತರಿರುವರು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಶೀರ್ಷಿಕೆ ಯಾದ( ಥೀಮ್) ನವೀನ ತಂತ್ರಜ್ಞಾನಗಳ ಮೂಲಕ ಸುಸ್ಥಿರ ಅಭಿವೃದ್ಧಿ ಅಡಿಯಲ್ಲಿ ನಡೆಯಲಿದ್ದು, ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆಯಲಿದೆ.
ಈ ಸಮಾವೇಶವನ್ನು ದೆಹಲಿಯ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದು ವಿವಿಧ ತಾಂತ್ರಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವುಗಳು ಪೇಪರ್ ಪ್ರೆಸೆಂಟೇಶನ್, ನೈಟ್ ಔಟ್ ಕೋಡಿಂಗ್, ಡಾರ್ಕ್ ಕೋಡಿಂಗ್, ಎಂಜಿನಿಯರ್ಸ್ ಐ, ಕಾರ್ಡ್ ಸ್ಟ್ರಕ್ಚರ್, ಇನ್ನೋವೇಟಿವ್ ಪ್ರೋಡಕ್ಟ್ ಡಿಸೈನ್, ಶಾರ್ಟ್ ಮೂವೀಸ್, ಪೋಸ್ಟರ್ ಪ್ರೆಸೆಂಟೇಶನ್, ಪ್ರೋಡಕ್ಟ್ ಮಾರ್ಕೆಟಿಂಗ್ ಮುಂತಾದವುಗಳು ಎಂದು ಕಾರ್ಯಕ್ರಮದ ಸಂಯೋಜಕರುಗಳಾದ ಡಾ ಮುರುಗೇಂದ್ರಪ್ಪ ಮತ್ತು ಡಾ ಭರತ್ ಕೆಎನ್ ಇದೇ ವೇಳೆ ತಿಳಿಸಿದರು.
ಐಎಸ್ ಟಿಇ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರುಗಳು ಮತ್ತು ಕರ್ನಾಟಕ ಐಎಸ್ ಟಿಇ ಸದಸ್ಯರುಗಳು ಭಾಗವಹಿಸುತ್ತಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಎಸ್ ಟಿಇ ಸದಸ್ಯ ವಿದ್ಯಾರ್ಥಿಗಳಿಗೆ 200 ರೂ ನೋಂದಣಿ ಶುಲ್ಕ ಹಾಗೂ ಸದಸ್ಯರಲ್ಲದ ವಿದ್ಯಾರ್ಥಿಗಳಿಗೆ 250 ರೂ ನೊಂದಣಿ ಶುಲ್ಕವಿದೆ. ಈ ಸಮಾವೇಶದಿಂದ ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಶೈಕ್ಷಣಿಕ ಬುದ್ಧಿಮಟ್ಟವನ್ನು ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್, ಇನ್ಫಾರ್ಮಶನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ ಬಿ ಎಸ್ ಸುನಿಲ್ ಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಕಾರ್ಯಕ್ರಮದ ಸಂಯೋಜಕರುಗಳಾದ ಡಾ ಮುರುಗೇಂದ್ರಪ್ಪ, ಡಾ ಭರತ್ ಕೆಎನ್ ಮತ್ತು ಇತರರು ಉಪಸ್ಥಿತರಿದ್ದರು



