ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯ ಪ್ರದೇಶ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದೆ. ಇಂದು (ಜು.05) ಬೆಳಗ್ಗೆ 6 ಗಂಟೆ ವೇಳೆಗೆ 30,167 ಕ್ಯೂಸೆಕ್ಸ್ ಒಳ ಹರಿವು ಇದ್ದು, ನೀರಿನ ಮಟ್ಟ 158.06 ಅಡಿಗೆ ತಲುಪಿದೆ. ನಿನ್ನೆ (ಜು.04) 155.07 ಅಡಿಯಷ್ಟು ನೀರಿತ್ತು.
ಕಳೆದ ಎರಡ್ಮೂರು ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಳ ಹರಿವು ಹೆಚ್ಚಳವಾಗಿದೆ.165 ಅಡಿ ತಲುಪಿದ ನಂತರವಷ್ಟೇ ಮುಂಗಾರು ಹಂಗಾಮಿನ ಭತ್ತ, ಕಬ್ಬು, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳಾದ ಅಡಿಕೆ,ತೆಂಗಿನ ಬೆಳೆಗೆ ನೀರು ಬಿಡುವುದಾಗಿ ಕಾಡಾ ಮಾಹಿತಿ ನೀಡಿದೆ.
- ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 158.06 ಅಡಿ
- ಪೂರ್ಣ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 41.536 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು: 30,167 ಕ್ಯೂಸೆಕ್ಸ್
- ಒಟ್ಟು ಹೊರಹರಿವು: 133 ಕ್ಯೂಸೆಕ್ಸ್
- ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
- ಎಡದಂಡೆ ನಾಲೆ: 0.00ಕ್ಯೂಸೆಕ್ಸ್
- ಕಳೆದ ವರ್ಷ ಈ ದಿನ : 155.3 ಅಡಿ



