ದಾವಣಗೆರೆ: ರಾಜ್ಯದಲ್ಲಿ ಹೊಸದಾಗಿ 3 ಲಕ್ಷ ರೈತರು ಸಹಿತ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ಕೊಡವ ಗುರಿ ಹೊಂದಲಾಗಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲವಿಲ್ಲ. ಎಸ್ ಸಿ, ಎಸ್ ಟಿ ವರ್ಗದವರಿಗೆ ಎಷ್ಟು ಸಾಲ ಕೊಡಬೇಕು ಎನ್ನುವುದರ ಬಗ್ಗೆ ನಿರ್ದೇಶನ ನೀಡಲಾಗಿದೆ.ಹಾಲು ಉತ್ಪಾಕರಿಗೆ ಅನುಕೂಲವಾಗುವಂತೆ ಕ್ಷೀರ ಸಹಕಾರ ಬ್ಯಾಂಕ್ ಆರಂಭಿಸುವ ಯೋಜನೆ ಇದೆ. ಇದರಲ್ಲಿ ಒಂಬತ್ತು ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಉದ್ದೇಶವಿದೆ ಎಂದರು
ರಾಜ್ಯ ಸರ್ಕಾರದ ಮಹತ್ವದ ಯಶಸ್ವಿನಿ ಯೋಜನೆ ಮತ್ತೆ ಆರಂಭವಾಗಲಿದೆ. ಈಗಾಗಲೇ ಇಲಾಖೆ ಕಡೆಯಿಂದ ಎಲ್ಲ ತಯಾರಿಯಾಗಿದ್ದು, ಈ ಬಗ್ಗೆ ಸಿಎಂ ಅವರ ಜೊತೆ ಮಾತಾಡಲಾಗಿದೆ. ಮುಂದಿನ ಅಕ್ಟೋಬರ್ ಎರಡರಂದು ಯೋಜನೆ ಉದ್ಘಾಟನೆ ಆಗಲಿದೆ ಎಂದರು.



