ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಕಾರ್ಯಕ್ರಮನ್ನು ಜೂ.28 ರ ಮಂಗಳವಾರದಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನೆರವೇರಿಸುವರು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್‍ರವರು ಉಪಸ್ಥಿತರಿರಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಸಮಗ್ರ ಆಜ್ಞೆ ಮತ್ತು ನಿಯಂತ್ರಣ ಕೇಂದ್ರದ ಲೋಕಾರ್ಪಣೆ (Integrated Command and Control Centre), ಬೆ.10.15 ಕ್ಕೆ ಶಾಮನೂರು ರಸ್ತೆಯಿಂದ ಗ್ಲಾಸ್‍ಹೌಸ್‍ವರೆಗೆ ಹಾಗೂ ಬೈಪಾಸ್ ರಸ್ತೆಯಿಂದ ಶಾಮನೂರು ರುದ್ರಭೂಮಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ, ಬೆ.10.30 ಕ್ಕೆ ತರಳಬಾಳು ಬಡಾವಣೆ, 1ನೇ ಮುಖ್ಯ ರಸ್ತೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ, ಬೆ.10.45 ಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿ ಕಟ್ಟಡದ ಉದ್ಘಾಟನೆ (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗಸಂಸ್ಥೆ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜ್ ಆವರಣ).
ಬೆ.11 ಕ್ಕೆ ನವೀಕರಣಗೊಂಡ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಉದ್ಘಾಟನೆ (ಹೈಸ್ಕೂಲ್ ಮೈದಾನದ ಆವರಣ), ಬೆ.11.10ಕ್ಕೆ ಪುನರ್ ನಿರ್ಮಿಸಲಾದ ಟೆನ್ನಿಸ್ ಕೋರ್ಟ್ ಕಟ್ಟಡದ ಉದ್ಘಾಟನೆ (ಹೈಸ್ಕೂಲ್ ಮೈದಾನದ ಆವರಣ), ಬೆ.11.25 ಕ್ಕೆ ಜಗಳೂರು ಬಸ್ ನಿಲ್ದಾಣ, ಮಹಾನಗರಪಾಲಿಕೆಯ ಖಾಸಗಿ ಬಸ್ ನಿಲ್ದಾಣ ಕಟ್ಟಡದ ಉದ್ಘಾಟನೆ (ಕೆ.ಆರ್.ರಸ್ತೆ ದಾವಣಗೆರೆ), ಬೆ.11.40 ಕ್ಕೆ ಆನೆಕೊಂಡ-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿಪೂಜೆ, ಬೆ.12 ಕ್ಕೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಅಪ್ರೋಚ್ ರಸ್ತೆ ಕಾಮಗಾರಿಯ ಭೂಮಿಪೂಜೆ (ಅನಿಲ್ ಕುಂಬ್ಳೆ ಆಟದ ಮೈದಾನ, ಡಿ.ಸಿ.ಎಂ. ಬಡಾವಣೆ ದಾವಣಗೆರೆ) ಕಾರ್ಯಕ್ರಮಗಳು ಜರುಗುವವು ಎಂದು ಸಾಟ್ರ್ಮ್ ಸಿಟಿ ಲಿಮಿಟೆಡ್‍ನ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮಲ್ಲಾಪುರ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



