Connect with us

Dvgsuddi Kannada | online news portal | Kannada news online

 ದಾವಣಗೆರೆ: ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ ಉನ್ನತೀಕರಿಸಿದ ಐಟಿಐ ಕೇಂದ್ರ ಲೋಕಾರ್ಪಣೆ

ದಾವಣಗೆರೆ

 ದಾವಣಗೆರೆ: ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ ಉನ್ನತೀಕರಿಸಿದ ಐಟಿಐ ಕೇಂದ್ರ ಲೋಕಾರ್ಪಣೆ

ದಾವಣಗೆರೆ: ಭಾರತ ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ ದಾವಣಗೆರೆ ಸರ್ಕಾರಿ ಐಟಿಐ ಕಾಲೇಜು ಉನ್ನತೀಕರಣದ ಶಿಲಾಫಲಕ ಅನಾವರಣವನ್ನು ಶಾಸಕ ಎಸ್. ಎ.  ರವೀಂದ್ರನಾಥ ಅನಾವರಣಗೊಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಏಕನಾಥ,  ನಿರ್ಮಿತಿಕೇಂದ್ರದ ಎಸ್.ರವಿ ಕಾಲೇಜು ಉಪನ್ಯಾಸಕರು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತಿರಿರುವರು.

ಕರ್ನಾಟಕ ಸರ್ಕಾರವು ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಇತರೇ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ಇದು ದೇಶದಲ್ಲೇ ವಿನೂತನ ಯೋಜನೆಯಾಗಿದ್ದು, ರಾಜ್ಯಾದ್ಯಂತ ಕೈಗಾರಿಕೆ 4.0 ತಂತ್ರಜ್ಞಾನಕ್ಕೆ ಅತ್ಯಾವಶ್ಯಕವಾದ ನುರಿತ ಮಾನವ ಸಂಪನ್ಮೂಲ ಒದಗಿಸುವ ಕೋರ್ಸ್‍ಗಳ ಮೂಲಕ ವಾರ್ಷಿಕ 20,000 ಮತ್ತು ಅಲ್ಪಾವಧಿ ಕೋರ್ಸ್‍ಗಳ ಮೂಲಕ ಒಂದು ಲಕ್ಷ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಾಗುತ್ತಿದೆ. ಇದರ ಫಲಶೃತಿಯಾಗಿ ಐಟಿಐ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಮತ್ತು ಉದ್ಯಮಶೀಲತಾ ಅವಕಾಶಗಳು ವೃದ್ಧಿಸುತ್ತಿದೆ.

ಸರ್ಕಾರವು ಕರ್ನಾಟಕ ರಾಜ್ಯದ ಆಯ್ದ 150 ಐಟಿಐ ಗಳನ್ನು ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಆಧುನಿಕ ಕಲ್ಪನೆಯ ಯೋಜನೆಯನ್ನು ಪ್ರಾರಂಭಿಸಿದೆ. ಒಟ್ಟಾರೆ ಈ ಕೆಳಕಂಡ ಹೊಸ ಕೋರ್ಸ್‍ಗಳನ್ನು ಅಳವಡಿಸಿದೆ. ಅವುಗಳೆಂದರೆ ಅತ್ಯಾಧುನಿಕ ತಂತ್ರಜ್ಞಾನ ವಲಯಗಳ ಸ್ವಯಂಚಾಲಿತ ಹಾಗೂ ನಿಯಂತ್ರಿತ ಕೈಗಾರಿಕಾ ಉತ್ಪನ್ನ, ವಿನ್ಯಾಸ ಹಾಗು ಋಜುವಾತು, ಅಡಿಟೀವ್ ಉತ್ಪಾದನೆ, ಕೈಗಾರಿಕಾ ರೋಬೊಟಿಕ್ಸ್ ಹಾಗೂ ಆರ್ಕ್ ವೆಲ್ಡಿಂಗ್ಸ್, ಅತ್ಯಾಧುನಿಕ ಪ್ಲಂಬಿಂಗ್, ವಾಹನ ಉತ್ಪದನಾ ಹಾಗೂ ಬ್ಯಾಟರಿ ವಾಹನಗಳು ಇಂಟರ್‍ನೆಟ್ ಆಫ್ ಥಿಂಗ್ಸ್

ಈ ಸಂಸ್ಥೆಯಲ್ಲಿ ಈ ಸಾಲಿನಿಂದ ಅಡ್ವಾನ್ಸ್‍ಡ ಸಿಎನ್‍ಸಿ ಮೆಷಿನಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಬ್ಯಾಟರಿ ಎಲೆಕ್ಟಿಕ್ ವೆಹಿಕಲ್ ಹಾಗೂ ಇಂಡಸ್ಟ್ರಿಯಲ್ ರೋಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ ನಂತಹ ಮೂರು ವಿಭಾಗಗಳಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದು ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಮತ್ತು ಉದ್ಯಮಶೀಲತಾ ಅವಕಾಶಗಳು ವೃದ್ಧಿಸುತ್ತದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top