ದಾವಣಗೆರೆ: ಸರ್ಕಾರದ ಯೋಜನೆಗಳಾದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಹೊಸಬೆಳಕು ಯೋಜನೆಯ ವಿದ್ಯುತ್ ಬಾಕಿ ವಸೂಲಿಯನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬೇವಿನಹಳ್ಳಿ ಮಹೇಶ್ ಆಗ್ರಹಿಸಿದ್ದಾರೆ.
ಈ ಯೋಜನೆಗಳಡಿ 60 ಸಾವಿರದಿಂದ 80 ಸಾವಿರ ರೂಪಾಯಿವರೆಗೆ ಬಿಲ್ ಬಂದಿದ್ದು, ಇದರಿಂದ ಬಡವರು ಕಂಗಾಲಾಗಿದ್ದಾರೆ. ಈ ಯೋಜನೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ತನಿಖೆಗೆ ಒಳಪಡಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಭಾಗ್ಯಜ್ಯೋತಿ ಹಗರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಭ್ರಷ್ಟಾಚಾರದ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಆ ಹಣವನ್ನು ಭಾಗ್ಯಜ್ಯೋತಿ ಹಣಕ್ಕೆ ತುಂಬಬೇಕು. ಅಧಿಕಾರಿಗಳು ತಪ್ಪುಲೆಕ್ಕ ಕೊಡುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದರು. ರೈತಮುಖಂಡರಾದ ಮಲ್ಲಾಪುರ ದೇವರಾಜ್, ಗುಡದಯ್ಯ, ನವೀನ್, ಹಾಲೇಶ್, ರೇವಣಸಿದ್ದಪ್ಪ, ಭಾಷ ಇದ್ದರು.



