ದಾವಣಗೆರೆ: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ನೀಡುವ ಉದ್ದೇಶದದಿಂದ ಮಣಿಪಾಲ್ ಆರೋಗ್ಯ ಕಾರ್ಡ್ ಜಾರಿಗೆ ತಂದಿದ್ದು, -2022 ನೇ ಸಾಲಿನ ನೋಂದಣಿ ಪ್ರಾರಂಭವಾಗಿದೆ ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮುಖ್ಯ ವ್ಯವಸ್ಥಾಪಕ ಕೆ.ಸಚಿನ್ ಕಾರಂತ್ ತಿಳಿಸಿದರು.
ಮಣಿಪಾಲ ಆರೋಗ್ಯ ಕಾರ್ಡ್ ಇದ್ದವರಿಗೆ ಎಲ್ಲಆರೋಗ್ಯ ಸೇವೆಗಳಲ್ಲಿ ನಿಗದಿತ ರಿಯಾಯಿತಿ ದೊರೆಯಲಿದೆ. ನಾಲ್ಕು ತಿಂಗಳಲ್ಲಿ ನೋಂದಣಿ ಮಾಡಿಸಬೇಕು. ಮಣಿಪಾಲ್ ಆರೋಗ್ಯ ಕಾರ್ಡ್‌ನ್ನು ಸಂಪೂರ್ಣ ಡಿಜಿಟಲ್ ಮಾಡಲಾಗಿದೆ. ಆಕಸ್ಮಾತ್ ಕಾರ್ಡ್‌ದಾರರು ಕಾರ್ಡ್ ತರುವುದನ್ನು ಮರೆತಲ್ಲಿ ನೋಂದಣಿ ಮಾಡಿಸಿದ ಮೊಬೈಲ್‌ನಿಂದ ಒಂದು ಮಿಸ್ಡ್ ಕಾಲ್ ಇಲ್ಲವೇ ಆರೋಗ್ಯ ಎಂದು ಎಸ್‌ಎಂಎಸ್ ಮಾಡಿದರೆ ಮೊಬೈಲ್‌ಗೆ ಎಲ್ಲಮಾಹಿತಿ ಬರುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಜುಲೈನಲ್ಲಿ ಕಾರ್ಡ್ ಪಡೆದವರ ಅವಧಿ ಆ.15, ನ. 15ಕ್ಕೆ ಮುಗಿಯುತ್ತದೆ. ಬೇಗ ಕಾರ್ಡ್ ಪಡೆಯುವುದರಿಂದ ಹೆಚ್ಚು ಅವಧಿಲಾಭ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಒಂದೇ ವ್ಯಾಲಿಡಿಟಿ ಟೈಮ್ ನಿಗದಿಪಡಿಸುವ ಚಿಂತನೆ ಇದೆ ಎಂದರು.



