ದಾವಣಗೆರೆ: ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮಹಿಳೆಯೊಬ್ಬರು 9 ತಿಂಗಳ ಹಸುಗೂಸಿಗೆ ನೇಣು ಹಾಕಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಗಳೂರಿನ ಜೆಸಿಆರ್ ಬಡಾವಣೆಯಲ್ಲಿ ನಡೆದಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ಸಿವಿಲ್ ಇಂಜಿನಿಯರ್ ಮನೋಜ್ ಕುಮಾರ್ ಪತ್ನಿ ಲಿಖಿತಾ (25) ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ 10 ತಿಂಗಳ ಮಗು ಅನೀಶ್ ನನ್ನು ನೇಣುಹಾಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೋಜ್ ಕುಮಾರ್ ಲಿಖಿತಾಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತದೆ. ಆತನ ವರ್ತನೆ ಮತ್ತು ಅಕ್ರಮ ಸಂಬಂಧದಿಂದ ನಮ್ಮ ಮಗಳು ನೊಂದಿದ್ದಳು ಎಂದು ಪೊಲೀಸರಿಗೆ ಪಾಲಕರು ದೂರು ನೀಡಿದ್ದಾರೆ.
ಒಂದು ವರ್ಷದ ಹಿಂದೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ಮನೋಜ್ ಕುಮಾರ್ ಜೊತೆ ವಿವಾಹವಾಗಿದ್ದ ನಿಖಿತಾ ನಿನ್ನೆ ಇದ್ದಕ್ಕಿದ್ದಂತೆ ಮಗನೊಂದಿಗೆ ಜಗಳೂರಿನ ಜೆಸಿಆರ್ ಬಡಾವಣೆಯಲ್ಲಿರುವ ತನ್ನ ತವರಿಗೆ ಬಂದಿದ್ದರು. ಈ ವೇಳೆ ಶಿಕ್ಷಕರಾಗಿದ್ದ ತಂದೆ -ತಾಯಿಗಳಿಬ್ಬರು ಇಂದು ಬೆಳಗ್ಗೆ ಶಾಲೆಗೆ ಹೋದ ನಂತರ ನಿಖಿತಾ ಮೊದಲು ಮಗನನ್ನು ನೇಣಿನ ಕುಣಿಕೆಗೆ ಹಾಕಿ ಕೊಂದು ಬಳಿಕ ತಾನು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರು ಲಕ್ಷ ರೂಪಾಯಿ ವರದಕ್ಷಿಣೆ, ಚಿನ್ನಾಭರಣ ಕೊಟ್ಟು ವಿವಾಹ ಮಾಡಿಕೊಟ್ಟಿದ್ದರೂ ಪ್ರತಿ ದಿನ ಮನೋಜ್ ಆಕೆಯನ್ನು ನಿಂದಿಸುವ ಜೊತೆಗೆ ತನ್ನ ತಾಯಿ ಮಾತು ಕೇಳಿಕೊಂಡು ತವರಿನಿಂದ ಹಣ,ಒಡವೆ ತರುವಂತೆ ಪೀಡಿಸುತ್ತಿದ್ದ ಎಂದು ಮೃತಳ ಪೋಷಕರು ದೂರಿದ್ದಾರೆ.
ಮದುವೆಯಾದಾಗಿನಿಂದಲೂ ನಿಖಿತಾಗೆ ಕಿರುಕುಳ ಕೊಡುತ್ತಿದ್ದ ಮನೋಜ್ ಆಕೆಯನ್ನು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಜೊತೆಗೆ ಬೇರೆಯವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ನಿಖಿತಾ ತನ್ನ 9 ತಿಂಗಳ ಮಗುವನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



