ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಜಿಲ್ಲಯೆ ಒಟ್ಟು 14.80 ಲಕ್ಷ ಮೌಲ್ಯದ 38 ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಸಬಂಧ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ.
ಬೈಕ್ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಹರಿಹರ ವೃತ್ತ ನಿರೀಕ್ಷಕ ಸತೀಶ್ ಕುಮಾರ ನೇತೃತ್ವದಲ್ಲಿ ಹರಿಹರ ನಗರ ಠಾಣೆಯ ಪಿಎಸ್‌ಐ ಸುರೇಶ , ಪಿಎಸ್ ಐ ಲತಾ ವಿ ತಾಳೇಕರ್ ಹಾಗೂ ಸಿಬ್ಬಂದಿಯವರನ್ನೋಳಗೊಂಡ ತಂಡವನ್ನು ರಚಿಸಿದ್ದು, ಈ ತಂಟ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ ಹಾಗೂ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದ್ವಿಚಕ್ರ ವಾಹನ (ಬೈಕ್) ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 6 ಜನ ಆರೋಪಿತರನ್ನು ಬಂಧಿಸಿದ್ದಾರೆ.
ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ- 08 , ಮಲೆಬೆನ್ನೂರು ಪೊಲೀಸ್ ಠಾಣೆ-04 , ಚನ್ನಗಿರಿ ಠಾಣೆ- 02, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ-02, ಹದಡಿ ಪೊಲೀಸ್ ಠಾಣೆ-02, ಮಾಯಕೊಂಡ ಪೊಲೀಸ್ ಠಾಣೆ-01, ಸಂತೆಬೆನ್ನೂರು ಪೊಲೀಸ್ ಠಾಣೆ-01, ಹೊನ್ನಾಳಿ ಪೊಲೀಸ್ ಠಾಣೆ-01 ಹಾಗೂ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪೊಲೀಸ್ ಠಾಣೆ-05, ಹೀರೇಕರೂರು ಪೊಲೀಸ್ ಠಾಣೆ-04, ಬ್ಯಾಡಗಿ ಪೊಲೀಸ್ ಠಾಣೆ-02, ಹಲಗೇರಿ ಪೊಲೀಸ್ ಠಾಣೆ-01, ರಾಣೆಬೆನ್ನೂರು ನಗರ ಪೊಲೀಸ್ ಠಾಣೆ-01, ಕುಮಾರಪಟ್ಟಣಂ ಪೊಲೀಸ್ ಠಾಣೆ-01, ಹಂಸಬಾವಿ ಪೊಲೀಸ್ ಠಾಣೆ- 02 ಹಾಗೂ ವಿಜಯ ನಗರ ಜಿಲ್ಲೆಯ ಹಿರೆಹಡಗಲಿ ಪೊಲೀಸ್ ಠಾಣೆ -01 ಪ್ರಕರಣ ದಾಖಲಾಗಿದೆ.
ಒಟ್ಟು 38 ಪ್ರಕರಣಗಳಲ್ಲಿ ಅಂದಾಜು ಮೌಲ್ಯ 14,80,000 ರೂ. ಬೆಲೆಯ ಒಟ್ಟು 38 ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಚಾರಣೆಗೆ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷ ರಾಮಗೊಂಡ ಬಸರಗಿ ಕೆ.ಎಸ್.ಪಿ.ಎಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.