ದಾವಣಗೆರೆ: ಪಶು ಪಾಲನಾ ಇಲಾಖಾ ವತಿಯಿಂದ 2021-22 ನೇ ಸಾಲಿನ ರಾಷ್ಟ್ರೀಯ ಕೃಷಿವಿಕಾಸ ಯೋಜನೆಯಡಿ ಕೌಮ್ಯಾಟ್(ರಬ್ಬರ್ ನೆಲಹಾಸು) ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಕೃಷಿವಿಕಾಸ ಯೋಜನೆಯಡಿ ನೆಲಹಾಸುಗಳನ್ನು ವಿತರಿಸಲು ಆಯ್ಕೆಯಾದ ಪ್ರತಿ ಫಲಾನುಭವಿಗೆ ಎರಡು ನೆಲಹಾಸುಗಳನ್ನು ವಿತರಣೆ ಮಾಡಲಾಗುವುದು. ಈ ಕಾರ್ಯಕ್ರಮದಡಿ ಘಟಕದ ವೆಚ್ಚ (ಎರಡು ಕೌಮ್ಯಾಟ್‍ಗಳಿಗೆ) ರೂ 6190 ಇದ್ದು ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ (ಶೇ50)ರೂ 3095 ಗಳ ಸಹಾಯಧನ ಮತ್ತು (ಶೇ50)ರೂ 3095 ಗಳ ಫಲಾನುಭವಿಗಳ ವಂತಿಕೆಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಅರ್ಜಿ ಸಲ್ಲಿಸಲು ಪ್ರೂಟ್ ಐಡಿ (ಗುರುತಿನ ಸಂಖ್ಯೆ) ಹೊಂದಿರಬೇಕು, ಕಡ್ಡಾಯವಾಗಿ ಕನಿಷ್ಟ 2 ಜಾನುವಾರುಗಳನ್ನು (ಎಮ್ಮೆ ಅಥವಾ ಹಸು) ಹೊಂದಿರಬೇಕು. ಎರಡು ಜಾನುವಾರುಗಳನ್ನು ಹೊಂದಿರುವ ಬಗ್ಗೆ ಸಂಭಂದಿಸಿದ ಪಶುವೈದ್ಯಾಧಿಕಾರಿಗಳಿಂದ ಪ್ರಮಾಣ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು (ಪ್ರಮಾಣ ಪತ್ರದಲ್ಲಿ ಆರ್.ಡಿ.ಸಂಖ್ಯೆ ಇರಬೇಕು). ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ 33.3 ಅಲ್ಪಸಂಖ್ಯಾತರಿಗೆ ಶೇ 15 ಮತ್ತು ವಿಶೇಷ ಚೇತನರಿಗೆ ಶೇ 03 ಆದ್ಯತೆ ನೀಡಲಾಗುವುದು
ಅರ್ಜಿ ಸಲ್ಲಿಸಲು ಜೂನ್ 02 ಕೊನೆಯದಿನವಾಗಿರುತ್ತದೆ. ಅರ್ಜಿಗಳಿಗೆ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಸಹಾಯಕ ನಿರ್ದೇಶಕರು /ಮುಖ್ಯ ಪಶು ವ್ಯೆದ್ಯಾಧಿಕಾರಿಗಳು (ಆಡಳಿತ) ಪಶು ಅಸ್ಪತ್ರೆ ದಾವಣಗೆರೆ, ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ, ಕಚೇರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



