ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಕಾಯ್ದಿರಿಸಲು, ಖಾಸಗಿ ಜಮೀನು ಖರೀದಿಸಲು, ಕ್ರಯಕ್ಕೆ ಕೊಡಲು ಆಸಕ್ತಿಯಿರುವ ಖಾತೆದರರು ಇದ್ದಲ್ಲಿ ಮಾರುಕಟ್ಟೆ ಬೆಲೆಯ ಮೂರು ಪಟ್ಟು ಬೆಲೆಗೆ ಜಮೀನು ಖರೀದಿಸಲಾಗುವುದು ಎಂದು ತಹಶೀಲ್ದಾರ್ ಬಸವನಗೌಡ ಕೊಟ್ಟೂರು ತಿಳಿಸಿದ್ದಾರೆ.
ದಾವಣಗೆರೆ ತಾಲ್ಲೂಕು ಕಸಬಾ ಉತ್ತರ ಹೋಬಳಿಯ ಓಬಜ್ಜಿಹಳ್ಳಿ, ಅರಸಾಪುರ. ಮಾಯಕೊಂಡ ಹೋಬಳಿಯ ರಾಂಪುರ, ಬಾಡ. ಲೋಕಿಕೆರೆ ಹೋಬಳಿಯ ಗೋಣಿವಾಡ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಕ್ರಯಕ್ಕೆ ಕೊಡಲು ಆಸಕ್ತಿಯಿರುವ ಖಾತೆದಾರರು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ದಾವಣಗೆರೆ ತಾಲ್ಲೂಕು ಕಚೇರಿ ಅಥವಾ ತಾಲ್ಲೂಕು ಪಂಚಾಯಿತಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.



