ದಾವಣಗೆರೆ: ದಾವಣಗೆರೆ ಇ-ಕೋರ್ಟ್ ನಲ್ಲಿ ಖಾಲಿ ಇರುವ 31 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ಯೂನ್, ಟೈಪಿಸ್ಟ್, ಕಾಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 17ರ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಒಟ್ಟು 31 ಹುದ್ದೆಗಳಲ್ಲಿ 22 ಪ್ಯೂನ್, 7 ಟೈಪಿಸ್ಟ್, 2 ಕಾಪಿಸ್ಟ್ ಹುದ್ದೆಗಳ ಭರ್ತಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಮೇ 17 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ 17000 – 42000/- ವೇತನ ನೀಡಲಾಗುತ್ತದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-05-2022.ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯ ವಯಸ್ಸು 17-05-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.
2A, 2B, 3A & 3B ಅಭ್ಯರ್ಥಿಗಳು: 3 ವರ್ಷ ಹಾಗೂ SC, ST ಅಭ್ಯರ್ಥಿಗಳು: 05 ವರ್ಷ ಸಡಿಲಿಕೆ ನೀಡಲಾಗಿದೆ. ಅರ್ಜಿ ಶುಲ್ಕ:ಸಾಮಾನ್ಯ ಅಭ್ಯರ್ಥಿಗಳು: 200/-, 2A, 2B, 3A, 3B ಅಭ್ಯರ್ಥಿಗಳು: 100/- ಹಾಗೂ SC / ST ಅಭ್ಯರ್ಥಿಗಳು: 100/-. ಆಯ್ಕೆ ಪ್ರಕ್ರಿಯೆ:ಟೈಪಿಂಗ್ ಪರೀಕ್ಷೆ ಮತ್ತು ಮೆರಿಟ್ , ಸಂದರ್ಶನ. ಹೆಚ್ಚಿನ ಮಾಹಿತಿಗೆ ಬೆಬ್ಸೈಟ್: districts.ecourts.gov.in ಗೆ ಭೇಟಿ ನೀಡಿ.ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-04-2022. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-05-2022. ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19-05-2022 ಕೊನೆಯ ದಿನ.



