ದಾವಣಗೆರೆ: ಲಂಚ ಸ್ವೀಕರಿಸುವಾಗಲೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಹರಿಹರ ನಗರಸಭೆ ಬಿಲ್ ಕಲೆಕ್ಟರ್ ಬಿದಿದ್ದಾರೆ.
ಹರಿಹರದ ಹರ್ಲಾಪುರದ ಗ್ರಾಮದ ರಾಘವೇಂದ್ರ ಎಂಬುವರ ನಿವೇನದ ಖಾತೆ ಬದಲಾವಣೆ ಹಾಗೂ ಕಂದಾಯ ರಶೀದಿ ನೀಡಲು ಹರಿಹರ ನಗರಸಭೆಯ ಬಿಲ್ ಕಲೆಕ್ಟರ್ ಮಂಜುನಾಥ್ 1.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಈ ಬಗ್ಗೆ ರಾಘವೇಂದ್ರ ಎಸಿಬಿ ದೂರು ನೀಡಿದ್ದರು. ರಾಘವೇಂದ್ರ ಅವರಿಂದ ಲಂಚ ಸ್ವೀಕರಿಸುವಾಲೇ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹರಿಹರ ನಗರಸಭೆಯ ಎದುರಿನ ಶಿವ ಗಾರ್ಡನ್ ರೆಸ್ಟೋರೆಂಟ್ ನಲ್ಲಿ 1.00,000 ರೂ. ಹಣ ಪಡೆಯುತ್ತಿದ್ದರು. ಕಾರ್ಯಾಚರಣೆಯಲ್ಲಿ ಪೂರ್ವ ವಲಯ ಎಸಿಬಿ ಕಲಾ ಕೃಷ್ಣಸ್ವಾಮಿ, ಮಾರ್ಗದರ್ಶನದಂತೆ, ಡಿಎಸ್‌ಪಿ ಮಂಜುನಾಥ್, ಪಿಐ ಮಧುಸೂಧನ್, ರವೀಂದ್ರ ಕುರುಬಗಟ್ಟಿ ಹಾಗೂ ದಾವಣಗೆರೆ ಎಸಿಬಿ ಠಾಣೆಯ ಸಿಬ್ಬಂದಿ ಉಮೇಶ್ ಎಸ್. ಆಂಜನೇಯ ವಿ.ಹೆಚ್, ವೀರೇಶಪ್ಪ, ಕಲ್ಲೇಶ್ವರಪ್ಪ, ಧನರಾಜ್, ಮೋಹನ್ ಕುಮಾರ್, ಬಸವರಾಜ್ ಸಿ.ಎಸ್. ವಿನಾಯಕ ಕಟೀಗರ್, ನಾಗರಾಜ್ ಪಾಲ್ಗೊಂಡಿದ್ದರು.