ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 06 ವೈದ್ಯಾಧಿಕಾರಿಗಳ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ನಡೆಯಲಿದೆ.
ಎಂ.ಬಿ.ಬಿ.ಎಸ್, ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ನ.26ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ ಕರೆಯಲಾಗಿದೆ.
ಅಭ್ಯರ್ಥಿಗಳು ನ.26 ರಂದು ಬೆಳಿಗ್ಗೆ 10.30 ರೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಹಾಜರಾಗಿ ಸಂಬಂಧಪಟ್ಟ ವಿಭಾಗದಲ್ಲಿ ವಿದ್ಯಾರ್ಹತೆ ಮತ್ತು ಮೀಸಲಾತಿಯ ಅರ್ಹತಾ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿ, ಅರ್ಹತಾ ದಾಖಲೆಗಳ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಲು ಸೂಚಿಸಿದೆ.
ಖಾಲಿ ಇರುವ ಹುದ್ದೆಗಳ ವಿವರ: ದಾವಣಗೆರೆ ತಾಲ್ಲೂಕಿನ ಹೆಮ್ಮನಬೇತೂರು ಪ್ರಾ.ಆ.ಕೇಂದ್ರಕ್ಕೆ 01 ಹುದ್ದೆ, ಹರಿಹರ ತಾಲ್ಲೂಕಿನ ನಂದಿಗುಡಿ ಗ್ರಾಮದ ಪ್ರಾ.ಆ.ಕೇಂದ್ರಕ್ಕೆ 01ಹುದ್ದೆ, ಜಗಳೂರು ತಾಲ್ಲೂಕಿನ ಸೊಕ್ಕೆ ಪ್ರಾ.ಆ.ಕೇಂದ್ರಕ್ಕೆ 01ಹುದ್ದೆ, ಮತ್ತು ಬಿದರಕೆರೆ ಪ್ರಾ.ಆ.ಕೇಂದ್ರಕ್ಕೆ 01 ಹುದ್ದೆ, ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಪ್ರಾ.ಆ.ಕೇಂದ್ರಕ್ಕೆ 01 ಹುದ್ದೆ, ಮಾವಿನಕಟ್ಟೆ ಗ್ರಾಮದ ಪ್ರಾ.ಆ.ಕೇಂದ್ರಕ್ಕೆ 01 ಹುದ್ದೆಯನ್ನು ನೇಮಕ ಮಾಡಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕು.ಕ..ಅಧಿಕಾರಿಗಳ ಕಚೇರಿಯ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



