ದಾವಣಗೆರೆ: ಪಕ್ಕದ ಜಮೀನು ಮಾಲೀಕ ಕಸ ಸುಡಲು ಹಚ್ಚಿದ ಬೆಂಕಿಗೆ ಸುಮಾರು 600 ಅಡಕೆ ಮರಗಳು ಸುಟ್ಟು ಭಸ್ಮವಾಗಿವೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೀರೇಕೊಗಲೂರು ಗ್ರಾಮದಲ್ಲಿ ನಡೆದಿದೆ.
ಎರಡು ಎಕರೆ ಪ್ರದೇಶದಲ್ಲಿದ್ದ ಬೆಳೆದಿದ್ದ ನಾಲ್ಕು ವರ್ಷದ ಫಸಲಿಗೆ ಬಂದಿದ ಅಡಕೆ ಮರಗಳು ಬೆಂಕಿಗೆ ಬಲಿಯಾಗಿವೆ. ಹೀರೇಕೊಗಲೂರ ಗ್ರಾಮದ ರುದ್ರಪ್ಪ ಎಂಬ ರೈತ ಎರಡು ಎಕರೆಯಲ್ಲಿ ಅಡಕೆ ಹಾಕಿದ್ದರು. ಅಕಾಸ್ಮಿಕವಾಗಿ ಬೆಂಕಿ ತಗುಲಿ ಇದೀಗ ಅಡಿಕೆ ಗಿಡಗಳು ನಾಶವಾಗಿವೆ.
ಪಕ್ಕದ ಜಮೀನು ಮಾಲೀಕ ಕೊಟ್ರಪ್ಪ ಕಸ ಸುಡುವುದಕ್ಕಾಗಿ ಬೆಂಕಿ ಹಚ್ಚಿದ್ದಾರೆ. ಇದೇ ಬೆಂಕಿ ವ್ಯಾಪಕವಾಗಿ ಹರಡಿ ಅಡಕೆ ತೋಟಕ್ಕೂ ಹೊತ್ತಿಕೊಂಡಿದೆ. ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅಡಕೆ ಮರ ಭಸ್ಮವಾಗಿದೆ. ಕಷ್ಟಪಟ್ಟು ಬೆಳೆಸಿದ ರೈತ ಕುಟುಂಬ ಕಣ್ಣೀರು ಹಾಕುತ್ತಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಅಡಕೆ ಮರಗಳು ಸುಟ್ಟು ಕರಕಲಾಗಿವೆ. ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



