ದಾವಣಗೆರೆ: ಯರಗುಂಟೆ/ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್15-ಕಮರ್ಷಿಯಲ್, ಎಫ್04-ಬಿ.ಟಿ ಮಾರ್ಗಗಳ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ನಿರ್ವಹಿಸಬೇಕಿರುವ ಕಾರಣ ಇಂದು (ಜ.29) ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಹಗೆದಿಬ್ಬ ಸರ್ಕಲ್, ಗಾಂಧಿನಗರ ಅಂಬೇಡ್ಕರ್ ಸರ್ಕಲ್, ಮಹಾರಾಜ ಪೇಟೆ, ಬಸವರಾಜ ಪೇಟೆ, ಚೌಕಿಪೇಟೆ, ವಿಜಯಲಕ್ಷ್ಮೀ ರಸ್ತೆ, ದೊಡ್ಡಪೇಟೆ, ಕಾಳಿಕಾದೇವಿ ರಸ್ತೆ, ಎಸ್‍ಕೆಪಿ ರಸ್ತೆ, ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು. ರೆಹಮಾನ್ ರಸ್ತೆ, ಮಂಡಕ್ಕಿ ಭಟ್ಟಿ 1ನೇ ಕ್ರಾಸ್‍ನಿಂದ 10ನೇ ಕ್ರಾಸ್‍ವರೆಗೆ, ರಿಂಗ್‍ರಸ್ತೆ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲಮಾಕ್ರ್ಸ್ ನಗರ, ದೇವರಾಜ್ ಕ್ವಾರ್ಟಸ್ (ಬೇತೂರ್ ರಸ್ತೆ) ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಎಮ್.ಸಿ.ಸಿ.ಬಿಎಫ್2 ಫೀಡರ್‍ನಲ್ಲಿ ಬೆ.ವಿ.ಕಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಸದ್ಯಜೋತಿ ಮಠ, ಎಂಸಿಸಿ. ಬಿ ಬ್ಲಾಕ್, ಶ್ರೀನಿವಾಸ್ ಶೆಟ್ಟಿ ಪಾರ್ಕ್, ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



