ದಾವಣಗೆರೆ: ಬಸವೇಶ್ವರ ಫೀಡರ್‍ನಲ್ಲಿ ಬೆ.ವಿ.ಕಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ಜ.11 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 03 ರವರೆಗೆ ಎಸ್.ಎಸ್. ಬಡಾವಣೆ, ಬಿ ಬ್ಲಾಕ್, ಕುಂದುವಾಡ ರಸ್ತೆ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಮ್‍ವಿಎ ಎನ್‍ಜಿಇಎಫ್ ಮತ್ತು 20 ಎಮ್‍ವಿಎ ಬಿಬಿಎಲ್ ಪರಿವರ್ತಕದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಫ್-9 ಶಾಮನೂರು ಫೀಡರ್: ಶಾಮನೂರು, ಜೆ.ಎಚ್. ಪಾಟೀಲ್ ನಗರ, ಡಾಲರ್ಸ್ ಕಾಲೋನಿ, ಶಿವ ಪಾರ್ವತಿ ಲೇಔಟ್, ವಾಜೀಪೆಯಿ ಲೇಔಟ್, ಮತ್ತು ಸಂಭ್ರಮ ಹೋಟೆಲ್ ಹಿಂಭಾಗ. ಜೆ.ಎಚ್.ಪಿ-1 ಫೀಡರ್: ಹೊಸಕುಂದವಾಡ, ಹಳೇಕುಂದವಾಡ, ಕೆ.ಎಚ್.ಬಿ. ಕಾಲೋನಿ, ಮತ್ತು ರಶ್ಮಿ ಸ್ಕೂಲ್ ಸುತ್ತಮುತ್ತ. ಎಫ್-21 ಎನ್,ಜೆ. ತರಳುಬಾಳು ಫೀಡರ್ : ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಿಲೇರಿ, ಹಳೇ ಬಿಸಿಲೇರಿ, 6ನೇ ಕಲ್ಲು ,7 ನೇ ಕಲ್ಲು ಮತ್ತು ಬನಶಂಕರಿ ಬಡಾವಣೆ 2 ನೇ ಹಂತ.
ಜೆ.ಎಚ್.ಪಿ-2 ಫೀಡರ್ : ಜರೀಕಟ್ಟೆ ಮತ್ತು ಮುದಹದಡಿ. ಎಫ್-12 ಅತ್ತಿಗೆರೆ ಫೀಡರ್: ಬೆಳವನೂರು, ಹೊಸ ಬೆಳವನೂರು, ಬೆಳವನೂರು ಇಂಡಸ್ಟ್ರಿಯಲ್, ತುರ್ಚಗಟ್ಟ, ಪಾಮೇನಹಳ್ಳಿ, ಸಿದ್ದಗಂಗಾ ಬಡಾವಣೆ ಮತ್ತು ಎಸ್.ಎಸ್. ಆಸ್ಪತ್ರೆ ಹಿಂಭಾಗ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



