ದಾವಣಗೆರೆ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಕಳೆದ ಸೆಪ್ಟಂಬರ್ 17 ರಂದು ನೇರ ಸಂದರ್ಶನ ನಡೆಸಲಾಗಿತ್ತು, ಇದೀಗ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ.
ಜಿಲ್ಲಾ ಗುಣ ಮಟ್ಟದ ಖಾತರಿ ಸಲಹೆಗಾರರು, ಆಪ್ಟೋಮೆಟ್ರಿಸ್ಟ್, ಆಯುಷ್ ಪಂಚಕರ್ಮ ತಜ್ಞ ವೈದ್ಯರು, ಥೆರಾಪಿಸ್ಟ್, ಶಾಲಾ ಆರೋಗ್ಯ ತಂಡದ ವೈದ್ಯಾಧಿಕಾರಿಗಳು, ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳ ಐಸಿಯೂ/ಹೆಚ್‍ಡಿಯೂ ಕೇಂದ್ರಗಳಿಗೆ ಶುಶ್ರೂಷಕಿಯರು, ಸಿವಿಲ್ ಹಾಗೂ ಬಯೋಮೆಡಿಕಲ್ ಇಂಜಿನಿಯರ್ ಹುದ್ದೆಗಳು, ಲಕ್ಷ್ಯಕಾರ್ಯಕ್ರಮ/ ಹೆಚ್‍ಡಿಯು, ಐಸಿಯು/ಮಕ್ಕಳ ಆರೋಗ್ಯ/ತಾಯಿ ಆರೋಗ್ಯ ಕಾರ್ಯಕ್ರಮಗಳಿಗೆ ಶುಶ್ರೂಷಕಿಯರ ಹುದ್ದೆಗಳು, ಓಟಿ ಟೆಕ್ನಿಷಿಯನ್ ರಾಷ್ಟ್ರೀಯ ನಗರ ಅಭಿಯಾನ ಯೋಜನೆಯಡಿ ಫಾರ್ಮಾಸಿಸ್ಟ್, ವೈದ್ಯರು, ಕಿರಿಯ ಪುರುಷ ಹಾಗೂ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳ ನೇರ ಸಂದರ್ಶನ ಏರ್ಪಡಿಸಲಾಗಿತ್ತು. ಇದೀಗ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಕಛೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ. ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಮರ್ಥನಿಯ ದಾಖಲೆಗಳ ಜೊತೆಗೆ ಲಿಖಿತ ಆಕ್ಷೇಪಣೆಗಳನ್ನು ಹತ್ತು ದಿನಗಳೊಳಗೆ ಕಛೇರಿಯ ಎನ್.ಹೆಚ್.ಎಂ ವಿಭಾಗಕ್ಕೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಎಸ್‍ಎಸ್ ಆಸ್ಪತ್ರೆ ಹಿಂಭಾಗ, ಎನ್‍ಸಿಸಿ ಕ್ಯಾಂಪ್ ಹತ್ತಿರ, ಶ್ರೀ ರಾಮನಗರ ರಸ್ತೆ ದಾವಣಗೆರೆ ಇವರನ್ನು ಸಂಪರ್ಕಿಸಬಹುದು ಎಂದು ಡಿಹೆಚ್‍ಒ ಡಾ. ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



