ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಂದು ಕಾರಿನಲ್ಲಿದ್ದ 6 ಜನರ ಸ್ಥಿತಿ ಗಂಭೀರವಾಗಿದೆ.
ಅಪಘಾತದಲ್ಲಿ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರ ಮಾಹಿತಿ ಲಭ್ಯವಾಗಬೇಕಿದೆ. ಸರಣಿ ಅಪಘಾತದಲ್ಲಿ ಮತ್ತೊಂದು ಕಾರಲ್ಲಿದ್ದ ಆರು ಜನರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾರಲ್ಲಿ ಕಾರುಗಳು ವಾಹನಗಳು ಸಂಫೂರ್ಣ ಜಖಂಗೊಂಡಿವೆ.
ನೈಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ನಿನ್ನೆ ರಾತ್ರಿ 9.30ರ ಸುಮಾರಿಗೆ ಟ್ರಕ್ ಕೇರಳ ನೋಂದಣಿ ಹೊಂದಿರುವ ವ್ಯಾಗನ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಟ್ರಕ್, ಕಾರುಗಳು ಮತ್ತು ಕಂಟೈನರ್‌ಗಳ ಸರಣಿ ಅಪಘಾತ ಸಂಭವಿಸಿದೆ. ಸರಣಿ ಅಪಘಾತದಲ್ಲಿ 2 ಕ್ವಾಲಿಸ್ ಮತ್ತು ಸ್ವಿಫ್ಟ್ ಕಾರುಗಳು ಮತ್ತು ಕಂಟೈನರ್ ವಾಹನಗಳು ಹಾನಿಗೊಳಗಾಗಿವೆ



