ದಾವಣಗೆರೆ: ಕೆಎಸ್ ಆರ್ ಟಿಸಿ ಬಸ್ ಚಾಲನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ರಭಸಕ್ಕೆ ತಡೆಗೋಡೆ ಪೀಸ್ ಪೀಸ್ ಆಗಿದೆ.
ನ್ಯಾಮತಿ ತಾಲೂಕು ಗೋವಿನಕೋವಿ ಸಮೀಪದ ಹರಳಹಳ್ಳಿಯಲ್ಲಿ ಇಂದು ಈ ಘಟನೆ ನಡೆದಿದೆ. ಮೈಸೂರಿನಿಂದ ಹೊನ್ನಾಳಿ ಕಡೆಗೆ ಹೊರಟಿದ್ದ ಬಸ್, ಮಾರ್ಗಮಧ್ಯೆ ಗೋವಿನಕೋವಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆ ಗೋಡೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಮತಿ ತಾಲೂಕಿನಲ್ಲಿ ಒಂದು ವಾರದ ಹಿಂದೆ ಅಷ್ಟೇ 2 ಖಾಸಗಿ ಬಸ್ಗಳು ಅಪಘಾತಕ್ಕೀಡಾಗಿದ್ದವು. ಸಾಲಬಾಳು-ಸುರಹೊನ್ನೆ ಗ್ರಾಮಗಳ ಮಾರ್ಗಮಧ್ಯೆ ಎರಡು ಖಾಸಗಿ ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು



