ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಸುತ್ತಿರುವ ಕ್ರೀಡಾಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2022-23ನೇ ಸಾಲಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ನಂತರ ವಿವಿಧ ಹಂತಗಳಲ್ಲಿ ಆಯ್ಕೆ ನಡೆಸಿ, ಕ್ರೀಡಾಶಾಲೆ ಹಾಗೂ ಕ್ರೀಡಾನಿಲಯಗಳಿಗೆ ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಾಗುವುದು. ಆಸಕ್ತ ಅರ್ಹ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ದಾವಣಗೆರೆ ಕ್ರೀಡಾ ಶಾಲೆ ಕಿರಿಯರ ವಿಭಾಗದಲ್ಲಿ ಬಾಲಕರಿಗೆ ಕಬಡ್ಡಿ, ಕುಸ್ತಿ, ಅಥ್ಲೇಟಿಕ್ ಕ್ರೀಡೆಗೆ ಆಯ್ಕೆ ಮಾಡಲಾಗುತ್ತಿದ್ದು, ದಿನಾಂಕ: 01-06-2022ಕ್ಕೆ 11 ವರ್ಷ ಮೀರಿರಬಾರದು ಮತ್ತು 5ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು. ಖೋ-ಖೋ ಕ್ರೀಡೆಗೆ : 01-06-2021ಕ್ಕೆ 12 ವರ್ಷ ಮೀರಿರಬಾರದು ಮತ್ತು 6ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಕಿರಿಯರ ವಿಭಾಗ (ಮೊದಲನೆ ಹಂತ) ಕ್ರೀಡೆಗಳಲ್ಲಿ ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೇಟ್‍ಬಾಲ್, ಫುಟ್‍ಬಾಲ್,ವಾಲಿಬಾಲ್, ಜಿಮ್ನಾಸ್ಟಿಕ್, ಈಜು,(ಬಾಲಕ, ಬಾಲಕಿಯರು). ಕಬಡ್ಡಿ ಮತ್ತು ಖೋ-ಖೋ (ಬಾಲಕರು) ಈ ವಿಭಾಗದಲ್ಲಿ ಪ್ರವೇಶ ಬಯಸುವ ಕ್ರೀಡಾಪಟುಗಳು ದಿನಾಂಕ: 01-06-2022ಕ್ಕೆ 14 ವರ್ಷ ಮೀರಿರಬಾರದು ಮತ್ತು 8ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಹಿರಿಯರ ವಿಭಾಗದಲ್ಲಿ ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೇಟ್‍ಬಾಲ್, ಫುಟ್‍ಬಾಲ್, ವಾಲಿಬಾಲ್, ಜಿಮ್ನಾಸ್ಟಿಕ್. (ಬಾಲಕ, ಬಾಲಕಿಯರು). ಕಬಡ್ಡಿ ಮತ್ತು ಖೋ-ಖೋ (ಬಾಲಕರು) : ಈ ವಿಭಾಗದಲ್ಲಿ ಪ್ರವೇಶ ಬಯಸುವ ಬಾಲಕ/ಬಾಲಕಿಯರು ದಿನಾಂಕ:01-06-2022ಕ್ಕೆ 19 ವರ್ಷ ಮೀರಿರಬಾರದು ಮತ್ತು ಪ್ರಥಮ ಪಿ.ಯು.ಸಿ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಆಯ್ಕೆ ನಡೆಯುವ ಸ್ಥಳ ಮತ್ತು ದಿನಾಂಕ ವಿವರ ಇಂತಿದೆ. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಜನ್ಮ ದಿನಾಂಕ ಪ್ರಮಾಣ ಪತ್ರದೊಂದಿಗೆ ಹಾಜರಾಗಲು ತಿಳಿಸಲಾಗಿದೆ. ಜನವರಿ 04 ರಂದು ಚನ್ನಗಿರಿ ತಾಲ್ಲೂಕು ಕ್ರೀಡಾಂಗಣ ಮೊ.ಸಂ: 9480796263. ಜನವರಿ 06 ರಂದು ಹರಿಹರ ತಾಲ್ಲೂಕು ಕ್ರೀಡಾಂಗಣ ಮೊ.ಸಂ: 9448667255. ಅದೇ ದಿನ ಜಗಳೂರು ತಾಲ್ಲೂಕು ಕ್ರೀಡಾಂಗಣ ಮೊ.ಸಂ: 7019565606. ಜನವರಿ 08 ರಂದು ಹೊನ್ನಾಳಿ ತಾಲ್ಲೂಕು ಕ್ರೀಡಾಂಗಣ ಮೊ.ಸಂ: 9448977066. ಜನವರಿ 11 ರಂದು ನ್ಯಾಮತಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೊ.ಸಂ: 9448977066. ಜನವರಿ 15 ರಂದು ದಾವಣಗೆರೆಯ ಜಿಲ್ಲಾ ಕ್ರೀಡಾಂಗಣ ಮೊ.ಸಂ: 9448667255 ನ್ನು ಸಂಪರ್ಕಿಸಬಹುದು. ವಿವಿಧ ತಾಲ್ಲೂಕು ಗಳಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಅಭ್ಯರ್ಥಿಗಳು ಭಾಗವಹಿಸಲು ಸಾಧ್ಯವಾಗದೇ ಇದ್ದಲ್ಲಿ ಅಂತಹವರು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಬಹುದಾಗಿದೆ.
ಮಕ್ಕಳ ಪಾಲಕರು, ಪೋಷಕರು ಆಯಾ ತಾಲ್ಲೂಕಿನ ಕೇಂದ್ರಗಳಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಮಕ್ಕಳನ್ನು ಕಳುಹಿಸಿ ಈ ಸದುಪಯೋಗವನ್ನು ಪಡೆದುಕೊಳ್ಳಲು ಈ ಮೂಲಕ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲ್ಲೂಕಿನ ಅಧಿಕಾರಿಗಳ ಮೊಬೈಲ್ ಸಂಖ್ಯೆ ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಕಚೇರಿ ದೂ.ಸಂ:08192-237480 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.