ದಾವಣಗೆರೆ: ನಗರದದ ರಸ್ತೆಗಳಿಗೆ ಅಳವಡಿಸಿರುವ ರೋಡ್ ಸ್ಟಡ್ ಗಳು (ROAD STUDS ) ಹಾಳಾಗಿ ಸ್ಟಡ್ ಮೊಳೆಗಳು ಮೇಲೆ ಬಂದಿದ್ದು, ಇದರಿಂದ ಬೈಕ್ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜನಸಾಮಾನ್ಯರ ಸೇವಾ ಸಂಸ್ಥೆ ಅಧ್ಯಕ್ಷ ಪ್ರಸನ್ನ ಬೆಳಕೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ಧಾರೆ.
ದಾವಣಗೆರೆ ಸ್ಮಾರ್ಟ ಸಿಟಿ ಲಿಮಿಟೆಡ್ ಹಾಗೂ ಇತರೆ ಇಲಾಖೆಗಳಿಂದ ನಗರದ ರಸ್ತೆಗಳಲ್ಲಿ ಸ್ಟಡ್ ಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಅಳವಡಿಸಿರುವ ಸ್ಟಡ್ ಮೊಳೆ ಮೇಲೆ ಬಂದಿದ್ದು, ಬೈಕ್ ಸವಾರರ ಚಕ್ರಗಳಿಗೆ ತಗುಲುತ್ತಿವೆ. ಇದರಿಂದ ಪಾದಚಾರಿಗಳಿಗೂ ಸಹ ತೊಂದರೆಯಾಗಿರುತ್ತದೆ. ನಗರದ ಪಿಬಿ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಲಾಗಿರುವ ರೋಡ್ ಸ್ಟಡ್ ಗಳು ತೀವ್ರವಾಗಿ ಹಾನಿಯಾಗಿರುತ್ತದೆ ಎಂದು ಮನವಿ ಮಾಡಿದ್ದಾರೆ.
ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಅಳವಡಿಕೆಯಾಗಿರುವ ಉಪಕರಣಗಳು ಕಳಪೆ ಗುಣಮಟ್ಟ ಹೊಂದಿದ್ದು, ಆದ್ದರಿಂದ ಬಹುಬೇಗ ಉಪಕರಣಗಳು ಹಾಳಾಗಿರುತ್ತದೆ. ಈ ಬಗ್ಗೆ ಹಳಾಗಿರುವ ಉಪಕರಣಗಳನ್ನು ಮರುಅಳವಡಿಕೆ ಮಾಡುವಂತೆ ದಾವಣಗೆರೆ ಸ್ಮಾರ್ಟ ಸಿಟಿ ಲಿಮಿಟೆಡ್ ಗೆ ಸಾಕಷ್ಟು ದೂರುಗಳನ್ನು ನೀಡಿದ್ದೇವೆ. ಆದರೆ ದಾವಣಗೆರೆ ಸ್ಮಾರ್ಟ ಸಿಟಿ ಲಿಮಿಟೆಡ್ ಅಧಿಕಾರಿಗಳು ನಮ್ಮ ದೂರಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ದಿನನಿತ್ಯ ಸಂಚರಿಸುವ ಸವಾರರಿಗೆ ತೊಂದರೆ ಮಾಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.