ದಾವಣಗೆರೆ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಕರೆ ಕೊಟ್ಟಿರುವ 2 ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರವು ಇಂದಿನಿಂದ ದೇಶದಾದ್ಯಂತ ಆರಂಭಗೊಂಡಿತು. ಮುಷ್ಕರದ ದಿನವಾದ ಇಂದು ದಾವಣಗೆರೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಮಂಡಿಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂಭಾಗ ಪ್ರತಿಭಟನಾ ಮತ ಪ್ರದರ್ಶನ ನಡೆಯಿತು.
ಕೇಂದ್ರ ಸರ್ಕಾರವು ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಸುಧಾರಣೆಯ ನೆಪದಲ್ಲಿ ಬ್ಯಾಂಕುಗಳ ಖಾಸಗೀಕಣ, ಜೀವವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯಲ್ಲಿ ಗಣನೀಯ ಹೆಚ್ಚಳ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಸರ್ಕಾರಿ ಬಂಡವಾಳದ ಹಿಂತೆಗೆದ ಮತ್ತು ಮಾರಾಟ ಮೊದಲಾದ ರಾಷ್ಟ್ರೀಕರಣ ವಿರೋಧಿ ಧೋರಣೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದೆ. ಇದನ್ನು ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ.ಸರ್ಕಾರವು ನಮ್ಮ ದೇಶಕ್ಕೆ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯ ಅಗತ್ಯತೆಯನ್ನು ಅರ್ಥೈಸಿಕೊಂಡು ಉದ್ದೇಶಿತ ಬ್ಯಾಂಕ್ ಖಾಸಗೀಕರಣ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಜಿಲ್ಲಾ ಸಂಚಾಲಕ ಕೆ.ಎನ್.ಗಿರಿರಾಜ್ ತಿಳಿಸಿದರು.
ಮುಷ್ಕರದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಅಂಗ ಸಂಘಟನೆಗಳಾದ ಎ.ಐ.ಬಿ.ಇ.ಎ., ಎ.ಐ.ಬಿ.ಓ.ಸಿ., ಎನ್.ಸಿ.ಬಿ.ಇ., ಎ.ಐ.ಬಿ.ಓ.ಎ., ಬಿ.ಇ.ಎಫ್.ಐ., ಐ.ಎನ್.ಬಿ.ಇ.ಎಫ್., ಐ.ಎನ್.ಬಿ.ಓ.ಸಿ., ಸಂಘಟನೆಗಳು ಭಾಗವಹಿಸಿದ್ದವು. ಬ್ಯಾಂಕ್ ಮುಷ್ಕರ ಅತ್ಯಂತ ಯಶಸ್ವಿಯಾಯಿತು. ದೇಶದಾದ್ಯಂತ ಸುಮಾರು ೯೦೦೦೦ಕ್ಕೂ ಹೆಚ್ಚಿನ ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟವು ಹಾಗೂ ಸುಮಾರು ೧೦ ಲಕ್ಷ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು. ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತ ಒಕ್ಕೂಟ ಮತ್ತು ಸ್ಟೇಟ್ ಬ್ಯಾಂಕ್ ಪಿಂಚಣಿದಾರರ ಸಂಘದ ಸದಸ್ಯರು ಕೂಡ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಮುಷ್ಕರದಲ್ಲಿ ಭಾಗವಹಿಸಿದರು. ಮುಷ್ಕರ ನಾಳೆಯೂ ಮುಂದುವರೆಯಲಿದೆ ಎಂದು ಜಿಲ್ಲಾ ಸಹ ಸಂಚಾಲಕ ಕೆ.ವಿಶ್ವನಾಥ್ ಬಿಲ್ಲವ ತಿಳಿಸಿದರು.
ಇAದಿನ ಮುಷ್ಕರದ ನೇತೃತ್ವವನ್ನು ಜಿಲ್ಲಾ ಸಂಚಾಲಕ ಕೆ.ಎನ್.ಗಿರಿರಾಜ್, ಸಹ ಸಂಚಾಲಕ ಕೆ.ವಿಶ್ವನಾಥ ಬಿಲ್ಲವ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಹೆಚ್.ಜಿ.ಸುರೇಶ್, ಹೆಚ್.ಎಸ್.ತಿಪ್ಪೇಸ್ವಾಮಿ, ವಿನೋದ್ ತೋರಗಲ್, ಆರ್.ಆಂಜನೇಯ, ವಿ.ಆರ್.ಹರೀಶ್, ಕೆ.ಶಶಿಶೇಖರ್, ಎಂ.ಎಸ್.ವಾಗೀಶ್, ಎಂ.ಪಿ.ಕಿರಣಕುಮಾರ್, ವಿ.ಎಂ.ತಿಪ್ಪೇಸ್ವಾಮಿ, ಬಿ.ಎ.ಸುರೇಶ್, ಶಶಿಕುಮಾರ್, ದುರುಗಪ್ಪ ಸಿ., ಮಂಜುನಾಥ್ ಜಿ.ವಿ., ಅನಿಲ್‌ಕುಮಾರ್, ಕಾಡಜ್ಜಿ ವೀರಪ್ಪ, ಕೆ.ರವಿಶಂಕರ್, ಅಜಯ್‌ಕುಮಾರ್, ಎಂ.ಎA.ಸಿದ್ದಲಿಂಗಯ್ಯ, ಜ್ಞಾನೇಶ್ವರ್, ಜಗಳೂರು ತಿಪ್ಪೇಸ್ವಾಮಿ, ರಮೇಶ್, ಶಿವಮೂರ್ತಿ ಪೂಜಾರ್, ಡಿ.ಎ.ಸಾಕಮ್ಮ, ಶ್ವೇತಾ ಬಿ.ಎನ್., ನಿತ್ಯಾನಂದ ಡೋಂಗ್ರೆ, ಸಿ.ಹೆಚ್.ಎಂ.ದೀಪಾ, ಗೀತಾ, ಸುಮಂತ್ ಭಟ್, ದೀಪಾ, ರೇಖಾ ಕೆ.ಹೆಚ್., ಟಿ.ಕೆ.ಗೊಂಬಿ, ಹೆಚ್.ನಾಗರಾಜ್, ಶಶಿಕುಮಾರ್, ಆಶಾ ಜ್ಯೋತಿ, ಸುನಂದಮ್ಮ, ಸುರೇಶ್ ಎಂ. ಮುಂತಾದವರು ವಹಿಸಿದ್ದರು.ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಶಾಂತ ಗಂಗಾಧರ್, ಅಜಿತ್‌ಕುಮಾರ್ ನ್ಯಾಮತಿ, ಹೆಚ್.ಸುಗೀರಪ್ಪ, ಜಿ.ಬಿ.ಶಿವಕುಮಾರ್, ಜೆ.ಓ.ಮಹೇಶ್ವರಪ್ಪ, ಗುರುರಾಜ್ ಭಾಗವತ, ಎನ್.ಆರ್.ಸುರೇಶ್, ಹುಲುಗಪ್ಪ ಪೂಜಾರ್ ಮತ್ತಿತರರು ಭಾಗವಹಿಸಿದ್ದರು.