ಡಿವಿಜಿ ಸುದ್ದಿ, ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ 9 ಜಿಲ್ಲೆಗಳಲ್ಲಿ 522 ನರ್ಸ್ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೀದರ್, ಬಳ್ಳಾರಿ, ಮೈಸೂರು, ಕೊಪ್ಪಳ, ಯಾದಗಿರಿ, ಕಲಬುರ್ಗಿ, ರಾಯಚೂರು, ಬಾಗಲಕೋಟೆ, ಕೋಲಾರ ಜಿಲ್ಲೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ : 552
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ : 18-11-2019
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 10-12-2019
ಲಿಖಿತ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆ ದಿನಾಂಕ : 21-12-2019
ಮೂಲ ದಾಖಲೆಗಳ ಪರಿಶೀಲನೆ ದಿನಾಂಕ: 26-12-2019
ವಿದ್ಯಾರ್ಹತೆ: ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್/ ಪೋಸ್ಟ್ ಬಿಎಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ K.N.C/I.N.C ನಲ್ಲಿ ನೋಂದಣಿ ಹೊಂದಿರಬೇಕು. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿರಬೇಕು.
ಮಾಸಿಕ ಸಂಬಳ: ಹುದ್ದೆಗೆ ನೇಮಕಗೊಂಡವರಿಗೆ ಮಾಸಿಕ ರೂ.24,200 ಸಂಭಾವನೆ ನೀಡಲಾಗುತ್ತದೆ. ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ನೇಮಕಗೊಂಡವರಿಗೆ ರೂ.22,000 ನೀಡಲಾಗುತ್ತದೆ. ಜೊತೆಗೆ ಕಾರ್ಯಕ್ಷಮತೆ ಆಧಾರದ ಮೇಲೆ ಮತ್ತು ಇನ್ಸೆಂಟಿವ್ ಜತೆಗೆ ಮಾಸಿಕವಾಗಿ ಇತರೆ ಹೆಚ್ಚಿನ ಹಣ ಗಳಿಸಬಹುದು.
ಅರ್ಜಿ ಸಲ್ಲಿಕೆ ವಿಧಾನ: ಅಪ್ಲಿಕೇಶನ್ ಅನ್ನು ಕೇವಲ ಆನ್ಲೈನ್ ಮುಖಾಂತರ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಲ್ಲಿಸಬೇಕಾಗಿದೆ.
ನೇಮಕಾತಿ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಆನ್ಲೈನ್ ಮುಖಾಂತರ ನಡೆಸಿ ಆಯ್ಕೆ ಮಾಡಲಾಗುವುದು. ಇತರೆ ಹೆಚ್ಚಿನ ಮಾಹಿತಿಗೆ www.karnataka.gov.in/hfw ವೆಬ್ ಸೈಟ್ ಗೆ ಭೇಟಿ ನೀಡಿಬಹುದು.