ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಧರ್ಮ ಪತ್ನಿ ಪಾರ್ವತಮ್ಮ ನೆನಪಿನ ಅಂಗವಾಗಿ ನ. 28 ರಿಂದ ಡಿ.1 ರವರೆಗೆ ಹೊನಲು ಬೆಳಕಿನ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೂರ್ನಿಯ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, 12 ನೇ ವರ್ಷದ ಈ ಟೂರ್ನಿ 4 ದಿನಗಳ ಕಾಲ ನಡೆಯಲಿದ್ದು, ಕೇರಳ, ಚೆನ್ನೈ, ಗೋವಾ, ಮಹಾರಾಷ್ಟ್ರ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಸೇರಿದಂತೆ 24 ತಂಡಗಳು ಭಾಗಿಯಾಗಲಿವೆ. ಹೊರಗಿನಿಂದ ಬಂದಂತಹ ತಂಡಗಳಿಗೆ ಉಚಿತ ಊಟ, ವಸತಿ ಇರುತ್ತದೆ. ವಿಶೇಷವಾಗಿ ಪೊಲೀಸ್, ಪತ್ರಕರ್ತರು, ವರ್ತಕರು, ಜಿಲ್ಲಾಧಿಕಾರಿಗಳ ತಂಡ, ಮಹಾನಗರ ಪಾಲಿಕೆ ಸದಸ್ಯರ ತಂಡ, ವಕೀಲರ ತಂಡ ಹೀಗೆ ಒಟ್ಟು 6 ತಂಡಗಳ ಅಫೀಶಿಯಲ್ ಕಪ್ ಪಂದ್ಯಾವಳಿ ಸಹ ನಡೆಯಲಿದೆ ಎಂದರು.
ಪ್ರಥಮ ಬಹುಮಾನ್: ಶಾಮನೂರು ಡೈಮಂಡ್ ಕಪ್, 3.55 ಲಕ್ಷ ನಗದು
ದ್ವಿತೀಯ ಬಹುಮಾನ : ಶಿವಗಂಗಾ ಕಪ್, 2.25 ಲಕ್ಷ ನಗದು
ತೃತೀಯ ಬಹುಮಾನ: 1.25 ಲಕ್ಷ ನಗದು, ಆಕರ್ಷಕ ಕಪ್
ಉತ್ತಮ ಆಲ್ ರೌಂಡರ್ ಗೆ ಹಿರೋ ಬೈಕ್
ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 3ನೇ ಅಂಪೈರ್ ವ್ಯವಸ್ಥೆ ಕೂಡ ಇದೆ. ಪಂದ್ಯದ ನೇರ ಪ್ರಸಾರವನ್ನು ಯುಟ್ಯೂಬ್ ನಲ್ಲಿ ನೇರ ಪ್ರಸಾರದಲ್ಲಿ ನೋಡುವ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಟೂರ್ನಿಗೆ 30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ಟೂರ್ನಿಯ ಉಪಾಧ್ಯಕ್ಷ ಶ್ರೀನಿವಾಸ ಶಿವಗಂಗಾ , ಕಾರ್ಯದರ್ಶಿ ಕುರುಡಿ ಗಿರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



