ಬೆಂಗಳೂರು: ಇಂದು ಬೆಳಗ್ಗೆಯಿಂದ ಕೆಎಎಸ್ ಅಧಿಕಾರಿ ಸೇರಿ 15 ಮಂದಿ ಭ್ರಷ್ಟ ನೌಕರರ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಕಡೆ ದಾಳಿ ಮಾಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ಧಾರೆ. ಎಸಿಬಿ ಬಲೆಗೆ ಬಿದ್ದ ಶಾಂತನಗೌಡರು ಮನೆಯ ಪೈಪ್‌ನಲ್ಲಿ ಹಣ ಬಚ್ಚಿಟ್ಟಿದ್ದರು. ಅಷ್ಟೇ ಅಲ್ಲದೆ ಬಕೆಟ್‌ನಲ್ಲಿ ಹಣ ತುಂಬಿಟ್ಟಿದ್ದು ಪತ್ತೆಯಾಗಿದೆ.
ರಾಜ್ಯದಲ್ಲಿ ಏಕಕಾಲಕ್ಕೆ 60ಕ್ಕೂ ಹೆಚ್ಚು ಕಡೆಗಳಲ್ಲಿ 8 ಮಂದಿ ಎಸ್‌ಪಿಗಳು, 100 ಅಧಿಕಾರಿಗಳು ಸೇರಿ 400 ಕ್ಕೂ ಹೆಚ್ಚಿನ ಸಿಬ್ಬಂದಿ ದಾಳಿ ಮಾಡಿದ್ದಾರೆ. ಪತ್ತೆಹಚ್ಚಿರುವ ಅಕ್ರಮ ಆಸ್ತಿ , ಚಿನ್ನ, ಬೆಳ್ಳಿ, ನಗದು ಬಂಗಲೆ, ನಿವೇಶನಗಳು ಆ ಕಂಡು ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಈ ಅಧಿಕಾರಿಗಳ ಅಕ್ರಮ ಆಸ್ತಿ ಬಗ್ಗೆ ಬಂದ ನೂರಾರು ದೂರುಗಳ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ಧಾರೆ.
ಗದಗದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರ ಮನೆಯಲ್ಲಿ 2.5ಕೋಟಿ ಮೌಲ್ಯದ 7ಕೆಜಿ ಚಿನ್ನ 12ಲಕ್ಷ ನಗದು ದೊರೆತಿದೆ. ದೊಡ್ಡಬಳ್ಳಾಪುರದ ರೆವಿನ್ಯೂ ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತಯ್ಯ ಅವರ ಬಹು ಮಹಡಿಗಳ ಕಟ್ಟಡ ಕೋಟ್ಯಾಂತರ ಮೌಲ್ಯದ್ದಾಗಿದ್ದು ಅವರ ಮನೆಯಲ್ಲಿ ಕೋಟಿ ಮೌಲ್ಯದ ಚಿನ್ನ ಬೆಳ್ಳಿ ಪತ್ತೆಯಾಗಿದೆ. ಜೇವರ್ಗಿಯ ಲೋಕೋಪಯೋಗಿ ಎಂಜಿನಿಯರ್ ಎಸ್.ಎಂ.ಬಿರಾದಾರ್ ಅವರ ಬಂಗಲೆ ಯಾವ ಸಚಿವರ ಬಂಗಲೆಗಿಂತ ಕಡಿಮೆ ಇಲ್ಲ. ಗೋಕಾಕ್‌ನ ಹಿರಿಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್ ಮನೆಯಲ್ಲಿ 1 ಕೆಜಿ 135 ಗ್ರಾಂ ಚಿನ್ನಾಭರಣಗಳು 82 ಲಕ್ಷ ನಗದು ಸಿಕ್ಕಿದೆ.
ನಗರದ ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ ಬಾಗಲಗುಂಟೆಯ ಗಿರಿ ಅವರ ಕಚೇರಿ ಮನೆಗಳ ಮೇಲೆ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಎಸಿಬಿ ಬಲೆಗೆ ಬಿದ್ದವರು
- ಕೆ.ಎಸ್ ಲಿಂಗೇಗೌಡ,ಕಾರ್ಯನಿರ್ವಾಹಕ ಇಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು
- ಶ್ರೀನಿವಾಸ್ ಕೆ. ಕಾರ್ಯನಿರ್ವಾಹಕಇಂಜಿನಿಯರ್ ಹೆಚ್.ಎಲ್.ಬಿ.ಸಿ ಮಂಡ್ಯ
- ಲಕ್ಷ್ಮಿಕಾಂತಯ್ಯ, ರೆವಿನ್ಯೂ ಇನ್ಸ್?ಪೆಕ್ಟರ್ ದೊಡ್ಡಬಳ್ಳಾಪುರ.
- ವಾಸುದೇವ್, ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು.
- ಬಿ.ಕೃಷ್ಣಾರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.
- ಟಿ.ಎಸ್.ರುದ್ರೇಶಪ್ಪ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಗದಗ
- ಎ.ಕೆ.ಮಸ್ತಿ, ಕೋ ಆಪರೇಟಿವ್ ಅಭಿವೃದ್ಧಿ ಅಧಿಕಾರಿ ಸವದತ್ತಿ ಎರವಲು ಸೇವೆ, ಬೈಲಹೊಂಗಲ
- ಸದಾಶಿವ ಮರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್?ಪೆಕ್ಟರ್ ಗೋಕಾಕ್
- ನಾತಾಜೀ ಹೀರಾಜಿ ಪಾಟೀಲ್, ಗ್ರೂಪ್ ಸಿ ಬೆಳಗಾಂ ಹೆಸ್ಕಾಂ
- ಕೆ.ಎಸ್.ಶಿವಾನಂದ್, ನಿವೃತ್ತ ಸಬ್ ರಿಜಿಸ್ಟರ್, ಬಳ್ಳಾರಿ
- ರಾಜಶೇಖರ್, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ
- ಮಾಯಣ್ಣ.ಎಂ, ಪ್ರಥಮ ದರ್ಜೆ ಸಹಾಯಕ ಬಿಬಿಎಂಪಿ ಬೆಂಗಳೂರು ರೋಡ್ಸ್ &ಇನ್ಫ್ರಾಸ್ಟ್ರಕ್ಚರ್
- ಎಲ್.ಸಿ.ನಾಗರಾಜ್, ಸಕಾಲ, ಅಡಳಿತಾಧಿಕಾರಿ, ಬೆಂಗಳೂರು
- ಜಿ.ವಿ.ಗಿರಿ, ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ
- ಎಸ್.ಎಂ.ಬಿರಾದಾರ್, ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಜೇವರ್ಗಿ.