ದಾವಣಗೆರೆ: ನಟ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ನಟನೆಯ ಮುಗಿಲುಪೇಟೆ ಚಿತ್ರದ ಪ್ರಮೋಷನ್ ಗಾಗಿ ದಾವಣಗೆರೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಸನ್ಮಾನಿಸಲಾಯಿತು.
ನಗರದ ವಿನೋಬನಗರದ ಮನು ಸ್ಟುಡಿಯೋದಲ್ಲಿ ಜಿಲ್ಲಾಧ್ಯಕ್ಷರಾದ ಎಂ.ಮನು ಹಾಗೂ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜುರವರು ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ನಾಗರಾಜ ಗಣೇಶ್ ಚಿನ್ನಿಕಟ್ಟೆ ದಯಾನಂದ ಮೋದಿ, ಮಹಾಲಿಂಗಪ್ಪ, ಗಿರೀಶ್,ಚೇತನ್ BR ರಾಜ್ಯ ಉಪಾಧ್ಯಕ್ಷರು ಮೆಡಿಕಲ್ ಶಾಪ್ ಮಂಜಣ್ಣ, ರಾಯ್ಕರ್, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



