ದಾವಣಗೆರೆ: ನಗರದ ರೇಣುಕಾ ಮಂದಿರ ಪಕ್ಕದಲ್ಲಿರುವ ಹಳೇ ಅಂಡರ್ ಪಾಸ್ ಗೆ ಮೇಯರ್ ಎಸ್.ಟಿ. ವೀರೇಶ್ ಭೇಟಿ ನೀಡಿ ಪರಿಶೀಲಿಸಿದರು.
ಅಂಡರ್ ಪಾಸ್ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಮೇಯರ್, ಕೂಡಲೇ ಬೀದಿ ದೀಪ ಅಳವಡಿಸಿ, ಸ್ವಚ್ಛತೆ ಕಾಪಡಬೇಕು. ಸಾರ್ವಜನಿಕರು ಕಸ ಹಾಕದಂತೆ ನಿಯಂತ್ರಿಸಲು ಸಿಸಿ ಟಿವಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಬಾರಲೈನ್ ರಸ್ತೆಯಲ್ಲಿ ಚಿಕನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿನ ತ್ಯಾಜ್ಯಗಳನ್ನು ಮಹಾನಗರ ಪಾಲಿಕೆ ತ್ಯಾಜ್ಯ ಸರಬರಾಜು ವಾಹನಗಳಿಗೆ ನೀಡಬೇಕು ಎಂದು ಚಿಕನ್ ಸೆಂಟರ್ ಮಾಲೀಕರಿಗೆ ತಿಳಿಸಿದರು,
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ ಟಿ.ಪಾಟೀಲ, ಪಂಜು ,ಈಶ್ವರ, ಪೀಸಾಳಿ ಶ್ರೀನಿವಾಸ್ ಶ್ರೀ ಕಾಂತ್ ನಿಲಗುಂದ್,ರಮೇಶ್ ಬಸಪ್ಪ,
ಪಾಲಿಕೆ ಅಧಿಕಾರಿಗಳಾದ ಉದಯಕುಮಾರ್ ಉಪಸ್ಥಿತರಿದ್ದರು.



