ದಾವಣಗೆರೆ: ನವೆಂಬರ್ 12 ರಿಂದ 14 ರವರೆಗೆ ತೆಲಂಗಾಣದ ಹನುಮಕೊಂಡದಲ್ಲಿ ನಡೆಯುವ 30ನೇ ದಕ್ಷಿಣ ಭಾರತ ಹಿರಿಯರ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯ ಪುರುಷರ ತಂಡಕ್ಕೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಜಿಲ್ಲಾ ಪಂಚಾಯತ್ ವಲಯದ ಕ್ರೀಡಾಪಟುಗಳಾದ ಅರ್ಜುನ್ ಮತ್ತು ಮಹಮ್ಮದ್ ತಾಸೀನ್ ಅವರು ಆಯ್ಕೆಯಾಗಿರುತ್ತಾರೆ.
ಕ್ರೀಡಾಪಟುಗಳಿಗೆ ಇಲಾಖೆಯ ಖೋ-ಖೋ ತರಬೇತುದಾರರಾದ ಜೆ.ರಾಮಲಿಂಗಪ್ಪ ಇವರು ತರಬೇತಿ ನೀಡುತ್ತಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ರಾಜ್ಯ ತಂಡ ವಿಜೇತರಾಗಲೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್, ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.



