ಡಿವಿಜಿ ಸುದ್ದಿ, ಮೈಸೂರು: ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನದಲ್ಲಿ ಕೇಲವ 8 ಸ್ಥಾನ ಕೂಡ ಗೆಲ್ಲಲು ಸಾಧ್ಯವಿಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಈ ಬಾರಿಯ ಚುನಾವಣೆಯನ್ನು ಅಕ್ರಮ ಮಾಡಲು ಸಜ್ಜಾಗಿದ್ದಾರೆ. ಮೈಸೂರಿನಲ್ಲಿ ಯೋಗೇಶ್ವರ್ ಪೋಟೋ ಇರೋ ಸೀರೆಗಳು ಸಿಕ್ಕಿವೆ. ಇದು ಚುನಾವಣಾ ಅಕ್ರಮ ಅಲ್ಲವೇ..?
ಕೋರ್ಟ್ ತೀರ್ಪು ಬಂದ ಮೇಲೆ ಒಬ್ಬೊಬ್ಬರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸತ್ಯ ಬಾಯಿ ಬಿಡುತ್ತಿದ್ದಾರೆ. ಜನರಿಗೆ ಅದು ಈಗ ಅರ್ಥವಾಗಿದೆ. ಅವರು ಏನೇ ಕಥೆ ಹೇಳಿರೂ ಅನರ್ಹತೆ ಪಟ್ಟಿಯಿಂದ ಹೊರ ಬರಲು ಸಾಧ್ಯವಿಲ್ಲ. ಅವರಿಗೆ ಅಂಟಿರುವ ಅನರ್ಹತೆ ಪಟ್ಟ ಹೋಗಿಲ್ಲ. ರಮೇಶ್ ಜಾರಕಿಹೋಳಿಯಂತವರ ಮಾತುಗಳಿಗೆ ಕಿಮ್ಮತ್ತಿಲ್ಲ ಎಂದರು.
ಅನರ್ಹ ಎಲ್ಲಾ ತ್ಯಾಗಿಗಳಲ್ಲ. ಅವರು ಸ್ವಾರ್ಥಿಗಳು. ಅವರೇನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ. ಅನರ್ಹರನ್ನು ಸಚಿವರಾಗಿ ಮಾಡುವ ಕುರಿತ ಸಿಎಂ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ,ಇದು ಚುನಾವಣೆ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವಾ? ಬಿಜೆಪಿಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಇರುವುದಿಲ್ಲವಾ ಎಂದು ಕಿಡಿಕಾರಿದರು.



