ದಾವಣಗೆರೆ: ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದ ಹೊರಗೆ ಹಾಗೂ ಮಹಾನಗರಪಾಲಿಕೆ ಪರಿಮಿತಿಯೊಳಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ಸಗಟು ವ್ಯವಹಾರ ನಡೆಯುತ್ತಿರುವ ಸ್ಥಳಗಳನ್ನು ಮಾರುಕಟ್ಟೆ ಉಪ ಪ್ರಾಂಗಣ ಗಳೆಂದು ಘೋಷಿಸಲ್ಪಟ್ಟಿರುವುದರಿಂದ ಈ ಪ್ರದೇಶಗಳಲ್ಲಿ ವ್ಯಾಪಾರ-ವಹಿವಾಟು ನಡೆಸುವ ವರ್ತಕರು ಮಾರುಕಟ್ಟೆ ಶುಲ್ಕ ಪಾವತಿಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ತಿಳಿಸಿದ್ದಾರೆ.
ಮಾರುಕಟ್ಟೆ ಉಪ ಪ್ರಾಂಗಣ ಎಂದು ಘೋಷಿಸಲ್ಪಟ್ಟಿರುವ ಪ್ರದೇಶಗಳಲ್ಲಿ ಲೈಸೆನ್ಸ್ ಪಡೆದು ವ್ಯಾಪಾರ-ವಹಿವಾಟು ನಡೆಸುವ ಪೇಟೆ ಕಾರ್ಯಕರ್ತರು ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ನಿಯಮ 1968 ರಂತೆ ಕ್ರಮವಹಿಸಿ ಹಾಗೂ ನಿಯಮಾನುಸಾರ ಮಾರುಕಟ್ಟೆ ಶುಲ್ಕ ಪಾವತಿಸಲು ಹಾಗೂ ವಾರದ ವರದಿ ತಃಖ್ತೆಗಳನ್ನು ಸಲ್ಲಿಸಬೇಕು ಮತ್ತು ಲೆಕ್ಕಪತ್ರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು.
ಅನುಸೂಚಿ-1 ರ ಪ್ರಕಾರ ಪೂರ್ವಕ್ಕೆ ಬಸಾಪುರ ರಸ್ತೆ, ಭಾರತ್ ಕಾಲೋನಿ, ಹೆಚ್.ಕೆ.ಆರ್ ಕಾಲೋನಿ, ಆನೆಕೊಂಡ ಮಟ್ಟಿಕಲ್ಲಿಗೆ ರಸ್ತೆ ಒಳಗೊಂಡ ಪ್ರದೇಶಗಳು. ಪಶ್ಚಿಮಕ್ಕೆ ಶೇಖರಪ್ಪನಗರ, ಬಿ.ಟಿ.ಗಲ್ಲಿರಸ್ತೆ, ಹೊಸ ಜಂಬೂ ಬಜಾರ್ ಪ್ರದೇಶ, ಅಮರಪ್ಪನ ತೋಟ ಸುಲ್ತಾನ್ ಪೇಟೆ ಬಿ.ಡಿ.ಓ ಕಚೇರಿ ಒಳಗೊಂಡು ಕೆ.ಆರ್ ರಸ್ತೆ ವರೆಗಿನ ಪ್ರದೇಶಗಳು. ಉತ್ತರಕ್ಕೆ ದಾವಣಗೆರೆ-ಜಗಳೂರು ರಸ್ತೆ. ದಕ್ಷಿಣಕ್ಕೆ ಮಾರುಕಟ್ಟೆ ಪ್ರಾಂಗಣದ ಪಶ್ಚಿಮ ಉಕ್ಕಡ.
ಅನುಸೂಚಿ-2 ರ ಪ್ರಕಾರ ಉದ್ದೇಶಿಸಿರುವ ಚೌಕಿಪೇಟೆ ಪ್ರದೇಶದ ಮಾರುಕಟ್ಟೆ ಉಪ ಪ್ರಾಂಗಣದ ಚಕ್ಕುಬಂಧಿ ಪೂರ್ವಕ್ಕೆ ಜಗಳೂರು ಬಸ್ ಸ್ಟ್ಯಾಂಡ್ ಹಾಗೂ ವಿ.ಆರ್.ಎಲ್ ಆಫೀಸ್ ಒಳಗೊಂಡ ಪ್ರದೇಶ. ಪಶ್ಚಿಮಕ್ಕೆ ಗಡಿಯಾರಕಂಬ, ವಿಜಯಲಕ್ಷ್ಮೀ ರಸ್ತೆ ಒಳಗೊಂಡ ಪ್ರದೇಶ. ಉತ್ತರಕ್ಕೆ ಮಂಡಿಪೇಟೆ ಒಳಗೊಂಡ ಪ್ರದೇಶ. ದಕ್ಷಿಣಕ್ಕೆ ಅಹಮ್ಮದ್ ನಗರ ಮುಖ್ಯ ರಸ್ತೆ ಒಳಗೊಂಡ ಪ್ರದೇಶ.
ಉದ್ದೇಶಿಸಿರುವ ಇಂಡಸ್ಟ್ರೀಯಲ್ ಏರಿಯಾ ಪ್ರದೇಶದ ಮಾರುಕಟ್ಟೆ ಉಪ ಪ್ರಾಂಗಣದ ಚಕ್ಕುಬಂಧಿ ಪೂರ್ವಕ್ಕೆ ಶ್ರೀರಾಮ್ ನಗರ, ಎಸ್.ಎಸ್.ಆಸ್ಪತ್ರೆ, ಬಾಡ ಕ್ರಾಸ್ ರಸ್ತೆವರೆಗಿನ ಪ್ರದೇಶ. ಪಶ್ಚಿಮಕ್ಕೆ ಹದಡಿ-ಶಿರಮಗೊಂಡನಹಳ್ಳಿ ರಸ್ತೆ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಒಳಗೊಂಡ ಪ್ರದೇಶ. ದಕ್ಷಿಣಕ್ಕೆ ಲೋಕಿಕೆರೆ ರಸ್ತೆ, ಮಹಾನಗರ ಪಾಲಿಕೆ ವ್ಯಾಪ್ತಿ ಒಳಗೊಂಡ ಪ್ರದೇಶ.
ಉದ್ದೇಶಿಸಿರುವ ಮಂಡಕ್ಕಿಬಟ್ಟಿ ಪ್ರದೇಶದ ಮಾರುಕಟ್ಟೆ ಉಪ ಪ್ರಾಂಗಣದ ಚಕ್ಕುಬಂಧಿ ಪೂರ್ವಕ್ಕೆ ಅಣ್ಣಿಗೆರೆ ವೀರಭದ್ರಪ್ಪ ನಗರ, ರಿಂಗ್ ರಸ್ತೆ ಒಳಗೊಂಡ ಪ್ರದೇಶ, ಪಶ್ಚಿಮಕ್ಕೆ ಕರೂರು ಇಂಡಸ್ಟ್ರೀಯಲ್ ಏರಿಯಾ, ಅವರಗೊಳ್ಳ-ಕೊಂಡಜ್ಜಿ ರಸ್ತೆ ಒಳಗೊಂಡ ಪ್ರದೇಶ. ಉತ್ತರಕ್ಕೆ ಇಮಾಂ ನಗರ, ಅಜಾದ್ ನಗರ ಒಳಗೊಂಡ ಪ್ರದೇಶ. ದಕ್ಷಿಣಕ್ಕೆ ಮಾಗನಹಳ್ಳಿ ರಸ್ತೆ ಒಳಗೊಂಡ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ವರ್ತಕರು ಮಾರುಕಟ್ಟೆ ಶುಲ್ಕ ಪಾವತಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



