ದಾವಣಗೆರೆ: ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಖಂಡಿಸಿದ್ದಾರೆ.
ಗಾಂಧೀ ಕುಟುಂಬ ಬಗ್ಗೆ ಮಾತನಾಡುವ ಬಗ್ಗೆ ಎಚ್ಚರವಿರಲಿ, ಬಿಜೆಪಿ ಪಕ್ಷದವರ ಸಂಸ್ಕೃತಿ ಇದೇನಾ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧೀ ಅವರ ಬಗ್ಗೆ ಮಾತನಾಡುವಾಗ ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಒಬ್ಬ ವ್ಯಕ್ತಿ ಬಗ್ಗೆ ಮಾತನಾಡುವ ಮುನ್ನ ತನ್ನ ಹಿನ್ನೆಲೆ ಬಗ್ಗೆ ಏನು ಎಂಬುದನ್ನ ತಿಳಿದುಕೊಳ್ಳಬೇಕೆಂದರು. ತಮ್ಮ ಪಕ್ಷದವರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಪಕ್ಷದ ಹಲವು ನಾಯಕರು ಜೈಲುಗೆ ಹೋಗಿ ಬಂದಿದ್ದಾರೆ ಅಂಥವರನ್ನೇ ಸರ್ಕಾರದಲ್ಲಿಟ್ಟುಕೊಂಡಿದ್ದೀರಾ ಮೊದಲು ತಮ್ಮ ಪಕ್ಷದ ನಾಯಕರ ಹಿನ್ನೆಲೆ ಅವರ ಬಗ್ಗೆ ತಿಳಿದು ಮಾತನಾಡಿ ಎಂದು ತಿಳಿಸಿದರು.
ಅಪರಾಧ ಮಾಡಿದವರೇ ನಿಮ್ಮ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣಗಳನ್ನ ತೆಗೆದು ಹಾಕಿ ನಂತರ ಮತ್ತೊಬ್ಬರ ತಟ್ಟೆ ನೋಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.ಕೂಡಲೇ ತಮ್ಮ ಹೇಳಿಕೆಯನ್ನ ವಾಪಾಸ್ ಪಡೆಯಬೇಕು ಇಲ್ಲವಾದರೆ ಕಿಸಾನ್ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಬಸವರಾಜು ವಿ ಶಿವಗಂಗಾ ಎಚ್ಚರಿಕೆ ನೀಡಿದ್ದಾರೆ.