ದಾವಣಗೆರೆ: ಕಾಡಾ ಕಾಮಗಾರಿಯಲ್ಲಿ 5 ಲಕ್ಷದವರೆಗೆ ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: 5 ಲಕ್ಷ ವರೆಗಿನ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ( ಕಾಡಾ) ಕಾಮಗಾರಿಯನ್ನು ಸ್ಥಳೀಯ ಗುತ್ತಿಗೆದಾರರಿಗೆ ಮಾನ್ಯುಯಲ್ ಟೆಂಡರ್ ಕರೆಯುವ ಹಾಗೆ ಪ್ರಸ್ತಾವನೆ ಸಲ್ಲಿಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಲಾಯಿತು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ 101 ನೇ ಮಂಡಳಿ ಸಭೆಯು ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಟೆಂಡರ್ ಅನುಸಾರ ರಾಜ್ಯದ ಯಾವುದೇ ಮೂಲೆಯಲ್ಲಿ ಗುತ್ತಿಗೆದಾರ ಕುಳಿತುಕೊಂಡು ಬಿಡ್ ಮಾಡಬಹುದು, ಬಿಡ್ ಮಾಡುವ ಗುತ್ತಿಗೆದಾರ ಕಡಿಮೆ ಬೆಲೆಗೆ ಕೋಟ್ ಮಾಡುವುದರಿಂದ ಹಾಗೂ ಸ್ಥಳೀಯ ಗುತ್ತಿಗೆದಾರರಿಗೆ ಸಬ್ ಕಾಂಟ್ರಾಕ್ಟ್ ನೀಡುವುದರಿಂದ ಗುಣ ಮಟ್ಟದ ಕೆಲಸ ನಿರ್ವಹಣೆ ಕಷ್ಟ ಸಾಧ್ಯವಾಗುತ್ತದೆ.ಆದ್ದರಿಂದ ಇದರಲ್ಲಿ ಬದಲಾವಣೆ ತಂದು ಸ್ಥಳೀಯ ಗುತ್ತಿಗೆದಾರರು ಭಾಗವಹಿಸಲು ಬದಲಾವಣೆ ತರುವಂತೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಕಳೆದ ಬಾರಿ ನಡೆದ 100 ನೇ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ನಡವಳಿಗಳ ಮೇಲೆ ತೆಗೆದುಕೊಂಡ ಅನುಪಾಲನಾ ಕ್ರಮಗಳನ್ನು ಮಂಡಿಸಲಾಯಿತು ಪವಿತ್ರಾ ರಾಮಯ್ಯ ತಿಳಿಸಿದರು.

ಕಳೆದ ಸಾಲಿನಲ್ಲಿ ರಾಜ್ಯ 2705 ಲೆಕ್ಕ ಶೀರ್ಷಿಕೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯಾನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ ಹಾಗೂ ನಬಾರ್ಡ್ ಯೋಜನೆಗಳಿಗೆ ಒಟ್ಟು 1629,52 ಲಕ್ಷ ಅನುದಾನ ಅಂಚಿಕೆಯಾಗಿದ್ದು ಇಲ್ಲಿಯವರೆಗೆ ಒಟ್ಟು 1304.68 ಲಕ್ಷ ಅನುದಾನ ಬಳಕೆಯಾಗಿದೆ ಎಂದರು.

ಕೇಂದ್ರ ಯೋಜಿತ 4705 ಲೆಕ್ಕ ಶೀರ್ಷಿಕೆಯಡಿ ಎಸ್.ಡಿ.ಪಿ ಯೋಜನೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು, ಭೂ ಸುಧಾರಣೆ ಕಾಮಗಾರಿಗಳಿಗೆ ಒಟ್ಟು 596.97 ಲಕ್ಷ ಅನುದಾನ ಮಂಜೂರಾಗಿದ್ದು ಸಂಪೂರ್ಣ ಕಾರ್ಯಸಾಧನೆ ಆಗಿದೆ ಎಂಬ ಮಾಹಿತಿ ಸಭೆಯ ಗಮನಕ್ಕೆ ತರಲಾಗಿದ್ದು, ಪಿಎಂಕೆಎಸ್ಸವೈ ಯೋಜನೆಯ ಅನುಸಾರ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯಾನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ, ಮೂಲಭೂತ ಸೈಕಾರ್ಯ ಹಾಗೂ ಇನ್ನಿತರ ಕಾಮಗಾರಿಗಳಿಗೆ ಒಟ್ಟು 120.34 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯಡಿ ಹೊಲಗಾಲುವೆ ಮತ್ತು ಆಯಕಟ್ಟು ರಸ್ತೆ ಅಭಿವೃದ್ಧಿ ಒಟ್ಟು 500 ಲಕ್ಷ ಅನುದಾನ ಮಂಜೂರಾಗಿದ್ದು, ಇದರಲ್ಲಿ 75 ಲಕ್ಷ ವರಾಯಿ ಯೋಜನೆಯಡಿ ಹೊಲಗಾಲುವೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನ 2705 ಲೆಕ್ಕ ಶೀರ್ಷಿಕೆಯಡಿ ಒಟ್ಟು 1016.52 ಲಕ್ಷ ನನಂಜುಂಡಪ್ಪ ವರದಿಯ ಅನುಸಾರ ಹಿಂದುಳಿದ ಮತ್ತು ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ 4705 ಎಸ್.ಡಿ.ಪಿ ಯೋಜನೆಯಡಿ ಬರುವ ಚನ್ನಗಿರಿ, ಹರಪನಹಳ್ಳಿ, ಹಿರೇಕೆರೂರು, ಹಿರಿಯೂರು, ಚಳ್ಳಕೆರೆ, ಹೊನ್ನಾಳಿ, ಹಾನಗಲ್, ಹಾವೇರಿ, ತರೀಕೆರೆ, ಶೀಕಾರಿಪುರ ಮತ್ತು ಶಿರಹಟ್ಟಿ ಮುಂದುವರೆದು ಕಾಮಗಾರಿಗಳು ಸುಮಾರು 158.27 ಲಕ್ಷ ಹಾಗೂ ಹೊಸ ಕಾಮಗಾರಿಗಳು ಸುಮಾರು 466.55 ಲಕ್ಷ ಮತ್ತು ನಬಾರ್ಡ್ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂಬ ಮಾಹಿತಿಯನ್ನು ಸಭೆಯ ಅವಹಾಗಾಹನೆಗೆ ತರಲಾಯಿತು.

ಭದ್ರಾ ಅಚ್ಚುಕಟ್ಟಿನ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತಿಯೊಬ್ಬ ನಿರ್ದೇಶಕರಿಗೆ 2 ಕೋಟಿಯಂತೆ ಒಟ್ಟು 25 ಕೋಟಿ ಅನುದಾನ ಕುರಿತು ಪ್ರಸ್ತಾವಣೆ ಸಲ್ಲಿಸಲು ಒಮ್ಮತದ ತೀರ್ಮಾನ ಕೈಗೊಂಡು, ನಿರ್ದೇಶಕರಿಗೆ ಪ್ರತಿ ಮಂಡಳಿ ಸಭೆಯ ದಿವಸ ನೀಡುವ 3 ಸಾವಿರ ಭತ್ಯೆ ಬದಲು 5 ಸಾವಿರಕ್ಕೆ ಹೆಚ್ಚಿಸುವಂತೆ ಹಾಗೂ ಪ್ರಯಾಣ ಭತ್ಯೆ, ದಿನ ನಿತ್ಯೆ ನೀಡುವಂತೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಆಡಳಿತಧಿಕಾರಿ ಶಿವಕುಮಾರ್, ನಿರ್ದೇಶಕರಾದ ವಿನಾಯಕ್, ಮಣಜುನಾಥ್, ಷಡಕ್ಷರಿ, ರುದ್ರಮೂರ್ತಿ ಷಣ್ಮುಕಪ್ಪ, ಸದಾಶಿವಪ್ಪ, ರಾಜಪ್ಪ, ಹನುಮಂತಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *