ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಪತ್ರಿಕಾ ದಿನಾಚಣೆ ಅಂಗವಾಗಿ ನೀಡುವ ಮಾಧ್ಯಮ ಪ್ರಶಸ್ತಿಯನ್ನು ಜನತಾವಾಣಿಯ ಇ. ಎಂ. ಮಂಜುನಾಥ್, ಸಂಯುಕ್ತ ಕರ್ನಾಟಕ ಉಪಸಂಪಾದಕ ಎ. ಎನ್. ನಿಂಗಪ್ಪ, ಸಂಜೆವಾಣಿಯ ಬಿ. ಎಂ. ಶಿವಕುಮಾರ್, ನಗರವಾಣಿಯ ಸುರೇಶ್ ಕೋಲ್ಕುಂಟೆ, ಟಿವಿ9 ಕನ್ನಡ ವಾಹಿನಿಯ ವಿಡಿಯೋ ಜರ್ನಲಿಸ್ಟ್ ರಾಮಪ್ಪ ಜಿ. ಎನ್. ಅವರಿಗೆ ನೀಡಿ ಸನ್ಮಾನಿಸಲಾಯಿತು.
ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಪ್ರಶಸ್ತಿ ಪ್ರದಾನ ಮಾಡಿದರು. ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ವರದಿಗಾರ ಕೂಟದ ಅಧ್ಯಕ್ಷ ಜಿ. ಎಂ.ಆರ್. ಆರಾಧ್ಯ, ಶಿವಮೊಗ್ಗದ ವಿಜಯವಾಣಿ ಸ್ಥಾನಿಕ ಸಂಪಾದಕ ಎನ್. ಡಿ. ಶಾಂತಕುಮಾರ್ , ಸಂಸ್ಥಾಪಕ ಅಧ್ಯಕ್ಷ ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ, ಖಜಾಂಚಿ ನಂದಕುಮಾರ್, ಪತ್ರಕರ್ತರಾದ ಮಲ್ಲಿಕಾರ್ಜುನ್ ಕಬ್ಬೂರ, ಬಸವರಾಜ್ ದೊಡ್ಮನಿ ಸೇರಿದಂತೆ ಕೂಟದ ಪ್ರಮುಖರು ಹಾಜರಿದ್ದರು.
ಸಚಿವ ಭೈರತಿ ಬಸವರಾಜ್, ಸಮಾಜದ ಅಂಕುಡೊಂಕು ತಿದ್ದುವ ಮೂಲಕ ಸರ್ಕಾರಗಳನ್ನು ಸದಾ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡಿ, ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದು ಸಲಹೆ ನೀಡಿದರು.