ದಾವಣಗೆರೆ: ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ಯುಬಿಡಿಟಿ ಕಾಲೇಜಿನ ಮೈದಾನದಲ್ಲಿ ಅ. 3ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಹಾಗೂ ಬೆಕ್ಕಿನ ಪ್ರದರ್ಶನ ಆಯೋಜಿಸಲಾಗಿದೆ.
5ನೇ ವರ್ಷದ ಶ್ವಾನ ಪ್ರದರ್ಶನ ಹಾಗೂ ಮೊದಲ ವರ್ಷದ ಬೆಕ್ಕಿನ ಪ್ರದರ್ಶನ ಕಾರ್ಯಕ್ರಮವನ್ನು ಬೆಳಗ್ಗೆ 11ಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಸಂಜೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಸಚಿನ್ ಹೇಳಿದರು
ಈ ಪ್ರದರ್ಶನದಲ್ಲಿ 350ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಲಿದ್ದು, ಶ್ವಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 7,500 ರೂ. ನೀಡಲಾಗುವುದು
ಪಪ್ಪಿಗಳ ವಿಭಾಗದಲ್ಲಿ 5,000 ರೂ. ಮೊದಲ ಬಹುಮಾನ, 3,000 ರೂ. ದ್ವಿತೀಯ ಬಹುಮಾನ, 2,000 ರೂ.ತೃತೀಯ ಬಹುಮಾನ ಕೊಡಲಾಗುತ್ತಿದೆ. ಭಾರತೀಯ ತಳಿಗೆ 3,000 ರೂ. ಹಾಗೂ ಮಿಶ್ರತಳಿ ವಿಭಾಗದಲ್ಲಿ ಮೊದಲ ಬಹುಮಾನ 1,000 ರೂ. ನೀಡಲಾಗುತ್ತದೆ. ಬೆಕ್ಕಿನ ವಿಭಾಗದಲ್ಲಿ ಮೊದಲ ಬಹುಮಾನವಾಗಿ 3 ಸಾವಿರ, ಎರಡನೇ ಬಹುಮಾನವಾಗಿ 2 ಸಾವಿರ ಹಾಗೂ ತೃತ್ತೀಯ ಬಹುಮಾನವಾಗಿ 1,000 ನೀಡಲಾಗುತ್ತಿದೆ.
ಪ್ರತಿ ಶ್ವಾನಕ್ಕೆ ಮುಂಗಡ ನೋಂದಣಿ ಶುಲ್ಕ 300, ಬೆಕ್ಕಿಗೆ 200 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಸ್ಥಳದಲ್ಲೇ ನೋಂದಣಿ ಮಾಡಿಸುವವರಿಗೆ ಶ್ವಾನಕ್ಕೆ 500, ಬೆಕ್ಕಿಗೆ 300 ರೂಪಾಯಿ ಆಗಿದೆ. ದೇಶಿ ತಳಿಯ ಶ್ವಾನಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗೆ 9844174555, 8147912080, 9844430647 ಸಂಪರ್ಕಿಸಿ.