ದಾವಣಗೆರೆ: ನಗರದ ಎಲ್ಲಾ ಆಟೋಗಳಿಗೆ ಅಕ್ಟೋಬರ್ 5ರೊಳಗೆ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ದಾವಣಗೆರೆ ಆರ್ ಟಿಒ ಇಲಾಖೆ ಆದೇಶ ಹೊರಡಿಸಿದೆ.
ಹಳೇಯ ಮೀಟರ್ ಹೊಂದಿದ ಮಾಲೀಕರು/ಚಾಲಕರು ಪರಿಷ್ಕೃತ ಆಟೋ ದರ ಪಟ್ಟಿಯನ್ನು ಪ್ರಯಾಣಿಕರಿಗೆ ಕಾಣುವಂತೆ ಆಟೋ ಚಾಲಕನ ಸೀಟಿನ ಹಿಂಭಾಗ ಅಂಟಿಸಬೇಕು. ಉಳಿದ ಮಾಲೀಕರು/ಚಾಲಕರು ಹೊಸ ಮೀಟರ್ ಅಳವಡಿಸಿಕೊಳ್ಳಬೇಕು. ಹಳೇಯ ಮೀಟರ್ ಹೊಂದಿದವರು ಅ. 31ರೊಳಗೆ ಹೊಸ ಮೀಟರ್ ಅಳವಡಿಸಿಕೊಳ್ಳಬೇಕು. ಅಲ್ಲಿವರೆಗೆ ಪರಿಷ್ಕೃತ ದರದಲ್ಲಿಯೇ ಸಂಚರಿಸಬೇಕು ಎಂದು ಆದೇಶಿಸಲಾಗಿದೆ.
ಮೀಟರ್ ಅಳವಡಿಕೆಗೆ ಈಗಾಲೇ ಕಾಲಮಿತಿಯನ್ನು ನೀಡಲಾಗಿದ್ದು, ಇದೀಗ ಅ.05ಕ್ಕೆ ಮರು ನಿಗದಿ ಮಾಡಿದ್ದು, ಈ ಸಮಯದದೊಳಗೆ ಎಲ್ಲ ಆಟೋಗಳಿಗೆ ಮಾಲೀಕರು/ಚಾಲಕರು ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.