ದಾವಣಗೆರೆ: ಮಹಾನಗರ ಪಾಲಿಕೆಯ ಎದುರಿನ ರೈಲ್ವೆ ಅಂಡರ್ ಪಾಸ್ ನಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯನ್ನು ಮೇಯರ್ ಎಸ್. ಟಿ. ವೀರೇಶ್ ವೀಕ್ಷಿಸಿದರು.
ಪ್ರತಿ ಸಲ ಮಳೆ ಬಂದಾಗಲೂ, ನೀರು ನಿಂತು ಜನರ ಓಡಾಟಕ್ಕೆ ತುಂಬಾ ತೊಂದರೆ ಆಗುತ್ತಿತ್ತು. ಇದಕ್ಕೆ ಶಾಶ್ವತಪರಿಹಾರ ಕಂಡುಗೊಳ್ಳಲು ಮೇಯರ್ ಯೋಜನೆ ರೂಪಿಸಿದ್ದರು. ಇದೀಗ ಈ ಕಾಮಗಾರಿ ನಡೆಯುತ್ತಿದ್ದು ಪಾಲಿಕೆ ಆಯುಕ್ತರೊಂದಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂರು ದಶಕಗಳಿಂದ ಸಮಸ್ಯೆಯಾಗಿದ್ದ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಅಂಡರ್ ಪಾಸ್ ನಲ್ಲಿ ಆಟೋಮೆಟಿಕ್ ಮೋಟಾರ್ ಅಳವಡಿಸುವುದು ಹಾಗೂ ಸುಸಜ್ಜಿತವಾದ ಪೇಂಟಿಂಗ್ ವ್ಯವಸ್ಥೆ ಮಾಡುವ ಕುರಿತಂತೆ ಪರಿಶೀಲನೆ ನಡೆಸಿದರು. ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ, ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.