ದಾವಣಗೆರೆ: ನಗರದ ಎಂ.ಸಿ.ಸಿ.ಬಿ ಬ್ಲಾಕ್‍ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಸಂಜೆ ಕಾಲೇಜು ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಈಗಾಗಲೆ ಪ್ರವೇಶ ಪ್ರಕ್ರಿಯೆಗಳು ಆರಂಭಗೊಂಡಿದೆ.
ಪ್ರಸಕ್ತ ವರ್ಷ ಬಿ.ಕಾಂ ಮತ್ತು ಬಿ.ಸಿ.ಎ ಕೋರ್ಸ್‍ಗಳು ಮಾತ್ರ ಲಭ್ಯ ಇರುತ್ತದೆ. ಪದವಿ ವಿದ್ಯಾರ್ಥಿಗಳಿಗೆ ಅನ್ವಯಿಸುವ ಪ್ರವೇಶ ಶುಲ್ಕವೇ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೂ ಅನ್ವಯಿಸಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ವೋತೋಮುಖ ಬೆಳವಣಿಗೆಗೆ ಪೂರಕ ವಾತವಾರಣ ಕಲ್ಪಿಸಲಾಗುತ್ತದೆ. ಸ್ಮಾರ್ಟ್ ಕ್ಲಾಸ್ ಕೊಠಡಿಗಳಿವೆ. ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಪ್ರಯೋಗಾಲಯ ಹಾಗೂ ಸ್ಮಾರ್ಟ್ ಸಿಟಿಯಿಂದ ಸ್ಥಾಪಿತವಾದ ಸ್ಮಾರ್ಟ/ಡಿಜಿಟಲ್ ಬೋರ್ಡ್ ಹಾಗೂ ಅನುಭವಿ ಪ್ರಾಧ್ಯಾಪಕರ ದೊಡ್ಡ ಬಳಗವೇ ಇದೆ.
ಹೆಚ್ಚಿನ ಮಾಹಿತಿಗಾಗಿ ಡಾ.ಡಿ.ಹೆಚ್ ಮಹಮೂದ್ ಖಾನ್ ಮೊ.ಸಂ :9535680786, ಡಾ.ಜೆ.ಎಂ ಮಂಜುನಾಥ ಮೊ.ಸಂ :9945973222, ಎನ್.ಜಗದೀಶ್ ಮೊ.ಸ :9740265836 ಸಂಪರ್ಕಿಸಬಹುದೆಂದು ಸರ್ಕಾರಿ ಕಾಲೇಜು ಪ್ರಾಂಶುಪಾಲರಾದ ಡಾ.ಸಾಯಿರಾಬಾನು ಎ ಫರೂಖಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



