ದಾವಣಗೆರೆ: ಸಿರಿ ಕನ್ನಡ ಖಾಸಗಿ ಮನರಂಜನಾ ವಾಹಿನಿಯ `ಹಾಸ್ಯ ದರ್ಬಾರ್’ ಕಾರ್ಯಕ್ರಮ ಸೆ. 25 ರಂದು ನಗರದ ಬಿಐಇಟಿ ಕಾಲೇಜು ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.
ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾರ ಪ್ರಾಣೇಶ್ , ಮುಖ್ಯಮಂತ್ರಿ ಚಂದ್ರು, ಎಂ.ಎಸ್. ನರಸಿಂಹಮೂರ್ತಿ, ಎಚ್. ದುಂಡುರಾಜ್, ಗುಂಡೂರಾವ್, ಸುಧಾಬರಗೂರ್, ಯಶವಂತ್ ಸರ್ ದೇಶಪಾಂಡೆ , ಮಿಮಿಕ್ರಿ ದಯಾನಂದ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ. ಹಾಸ್ಯ ದರ್ಬಾರ್ ಕಾರ್ಯಕ್ರಮ ಪ್ರತಿ ದಿನ 07.30ಕ್ಕೆ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.



